ಮಂಗಳೂರು: ‘ಸುಮಾರು 600 ವರ್ಷಗಳ ಹಿಂದೆ ದಾಸಶ್ರೇಷ್ಠರಾದ ಕನಕದಾಸರು ಭಕ್ತಿಯ ಸಾಮಾಜ್ಯ ಕಟ್ಟಿದರು. ಭಗವಂತನಿಗೆ ಬೇಕಿರುವುದು ನಿರ್ಮಲ ಭಕ್ತಿಯೇ ಹೊರತು, ಜಾತಿ, ಅಂತಸ್ತು ಅಧಿಕಾರವಲ್ಲ ಎಂದು ಪ್ರತಿಪಾದಿಸಿದರು’ ಎಂದು ಹೊಸದುರ್ಗ ಕನಕ ಗುರುಪೀಠ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಕರಾವಳಿ ಕುರುಬರ ಸಂಘವು ನಗರದ ಉರ್ವ ಸ್ಟೋರ್ನ ತುಳುಭವನದಲ್ಲಿ ಭಾನುವಾರ ಆಯೋಜಿಸಿದ್ದ 538ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ಚನ ನೀಡಿದರು.

‘ಅಂದಿನ ಕಾಲದಲ್ಲಿ ಧರ್ಮ ಹಾಗೂ ದೇವರ ವಿಚಾರಗಳು ಸಂಸ್ಕೃತದಲ್ಲಿದ್ದವು. ಸಾಮಾನ್ಯ ಜನರಿಗೆ ಅವುಗಳನ್ನು ತಿಳಿದುಕೊಳ್ಳುವುದು ಸಾಧ್ಯವಿರಲಿಲ್ಲ. ಬಸವಾದಿ ಶರಣರು, ಕನಕದಾಸರು ಸೇರಿದಂತೆ ದಾಸವರೇಣ್ಯರು ಧಾರ್ಮಿಕ ವಿಚಾರಗಳನ್ನು ಒಳಗೊಂಡ ಪದ್ಯಗಳನ್ನು ಕನ್ನಡದಲ್ಲಿ ರಚಿಸಿ ಸಾಮಾನ್ಯ ಜನರಿಗೂ ಈ ವಿಚಾರ ಅರ್ಥವಾಗುವಂತೆ ಮಾಡಿದರು’ ಎಂದರು.

‘ಕನಕದಾಸರು ಪ್ರತಿ ಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಶ್ರೀಕೃಷ್ಣ ಮಠವನ್ನು ಸಂದರ್ಶಿಸುತ್ತಿದ್ದರು. ಅಷ್ಟಮಿಗೆ ಬರುವ ಜನರ ಸೇವೆ ಮಾಡುತ್ತಿದ್ದರು. ಅಂದು ಬಡವರ ಆಹಾರವೆಂದು ಕರೆಯಲಾಗುತ್ತಿದ್ದ ರಾಗಿ ಅಂಬಲಿಯನ್ನು ಅವರು ಕೃಷ್ಣನಿಗೆ ಅರ್ಪಿಸುತ್ತಿದ್ದರು. ಆದ್ದರಿಂದ ಇಂದಿಗೂ ಉಡುಪಿ ಕೃಷ್ಣ ಮಠದಲ್ಲಿ ರಾಗಿ ಅಂಬಲಿ ಪ್ರಥಮ ನೈವೇದ್ಯ’ ಎಂದರು

‘ಕುರುಬ ಸಮುದಾಯದವರು ಒಗ್ಗಟ್ಟಾಗಿ ಸಂಘಟಿತರಾಗಿ. ಎಲ್ಲಾ ಸಮುದಾಯವರನ್ನು ಪ್ರೀತಿಸಿ ಅನ್ಯೋನ್ಯತೆಸೌಹಾರ್ದದಿಂದ ಬಾಳಬೇಕಿದೆ. ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿಸಬೇಡಿ. ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ. ಇದರಿಂದ ಅವರು ಉತ್ತಮ ಭವಿಷ್ಯ, ಜೀವನ ರೂಪಿಸಿಕೊಳ್ಳುತ್ತಾರೆ‘ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಶ್ರೀಧರ್ ಟಿ.ಡಿ. ಮಾತನಾಡಿದರು. ಯುವ ಸಾಹಿತಿ ಪ್ರವೀಣ ವೈ. ಬೆನಕವಾರಿ ಕನಕ ಜಯಂತಿ ಸಂದೇಶ ನೀಡಿದರು. ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ , ಶ್ರೀದೇವಿ ಕಾಲೇಜಿನ ಪ್ರಾಂಶುಪಾಲ ಕೆ.ಇ. ಪ್ರಕಾಶ್, ಸಂಘದ ಉಪಾಧ್ಯಕ್ಷರಾದ ಮಂಜುನಾಥ ನೋಟಗಾರ, ಕೆ.ಬಿ. ನಾಗರಾಜ್, ಕಾರ್ಯದರ್ಶಿ ನವೀನ್, ಜೊತೆ ಕಾರ್ಯದರ್ಶಿ ಯಲ್ಲಪ್ಪ ಹದಗಲ್, ಖಜಾಂಚಿ ಮಲ್ಲಿಕಾರ್ಜುನ ಕಲ್ಲಹೊಲದ, ನಿರ್ದೇಶಕ ನಾರಾಯಣ ಪಾಟೀಲ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಝೇರಿ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ ಭಾಗವಹಿಸಿದ್ದರು.

ಕನಕದಾಸರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೂ ಮುನ್ನ ಉರ್ವ ಸ್ಟೋರ್ ಜಂಕ್ಷನ್ ನಿಂದ ತುಳು ಭವನದವರೆಗೆ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ಮಹಿಳೆಯರು ಕಲಶ ಹೊತ್ತು ಸಾಗಿದರು. ಹನುಮಂತ ಕಣ್ಣಣ್ಣವರ್ ತಂಡದ ಡೊಳ್ಳು ಕುಣಿತ ಶ್ರೀದುರ್ಗಾದೇವಿ ಮಕ್ಕಳ ಕುಣಿತ ಭಜನಾ ತಂಡದ ಕುಣಿತ ಭಜನೆ ಮೆರವಣಿಗೆಗೆ ಮೆರುಗು ನೀಡಿದವು. ಶಾರದಾ ಕಲಾತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

‘ಅಜ್ಞಾನ ಕಳೆದಿದ್ದ ಕನಕದಾಸರು’

‘ಕನಕದಾಸರು ಬ್ರಾಹ್ಮಣರನ್ನು ಬಯ್ಯುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಅವರು ಅಜ್ಞಾನ ತೊಡೆದು ಜ್ಞಾನದ ಬೆಳಕು ನೀಡುತ್ತಿದ್ದರು. ಕನಕರನ್ನು ಎಂಜಲು ಎಂದು ಅವರೆಲ್ಲಾ ಕರೆಯುತ್ತಿದ್ದರು. ಅದಕ್ಕೆ ಕನಕರು ನೀವು ದೇವರಿಗೆ ಅರ್ಪಿಸುವ ನೀರು ಮೀನಿನ ಎಂಜಲು ಅಲ್ಲವೇ? ನೈವೇದ್ಯ ಕರುವಿನ ಎಂಜಲಲ್ಲವೇ? ಎಂದು ಪ್ರಶ್ನಿಸಿ ಅವರ ಅಜ್ಞಾನ ಕಳೆದಿದ್ದರು’ ಎಂದು ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.