ಮಂಗಳೂರು: ಸೀನಿಯರ್ ಪುರುಷರ ಮತ್ತು 19 ವರ್ಷದೊಳಗಿನ ಪುರುಷರ ವಿಭಾಗಗಳ ಅಗ್ರ ಶ್ರೇಯಾಂಕಿತ, ಬೆಂಗಳೂರಿನ ಅಭಿನವ್ ಗರ್ಗ್, ಸೀನಿಯರ್ ಮಹಿಳಾ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಬೆಂಗಳೂರಿನ ಅಶ್ವತಿ ವರ್ಗೀಸ್ ಮತ್ತು 19 ವರ್ಷದೊಳಗಿನ ಮಹಿಳಾ ವಿಭಾಗದ ಅಗ್ರ ಶ್ರೇಯಾಂಕದ ಆಟಗಾರ್ತಿ ಬೆಂಗಳೂರಿನ ದಿಯಾ ಭೀಮಯ್ಯ ಅವರು ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಉರ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿರುವ ಟೂರ್ನಿಯ ಗುರುವಾರ ನಡೆದ ಸೀನಿಯರ್ ಪುರುಷರ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಅಭಿನವ್ 21–10, 21–14ರಲ್ಲಿ ಪ್ರವರಾರ್ಚಿತ್ ರುದ್ರಾಕ್ಷಲಮಠಂ ವಿರುದ್ಧ ಗೆಲುವು ಸಾಧಿಸಿದರು. 19 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರಿನ ರೋಹನ್ ಶ್ರೀಸಾಯ್ ಅವರನ್ನು 21–13, 21–12ರಲ್ಲಿ ಮಣಿಸಿದರು.

ಸೀನಿಯರ್ ಮಹಿಳಾ ವಿಭಾಗದಲ್ಲಿ ಅಶ್ವತಿ ವರ್ಗೀಸ್ ಅವರು ಬೆಂಗಳೂರಿನ ಅನನ್ಯಶ್ರೀ ಮುರಳಿ ವಿರುದ್ಧ 21–12, 21–19ರಲ್ಲಿ ಜಯ ಗಳಿಸಿದರೆ, 19 ವರ್ಷದೊಳಗಿನವರ ವಿಭಾಗದಲ್ಲಿ ದಿಯಾ 21–17, 21–17ರಲ್ಲಿ ಅನನ್ಯಶ್ರೀ ಮುರಳಿ ಎದುರು ಗೆಲುವು ದಾಖಲಿಸಿದರು. ಮಹಿಳೆಯರ ಡಬಲ್ಸ್ನಲ್ಲಿ ಅಶ್ವತಿ ಮತ್ತು ದಿಯಾ ಜೋಡಿ ಕ್ವಾರ್ಟರ್ ಫೈನಲ್ ತಲುಪಿದರು. 19 ವರ್ಷದೊಳಗಿನ ಮಹಿಳೆಯರ ಡಬಲ್ಸ್ನಲ್ಲಿ ಸಿಂಚನಾ ಸಿ ಮತ್ತು ದಕ್ಷಿಣ ಕನ್ನಡದ ಅದಿತಿ ಆಚಾರ್ಯ ಜೋಡಿ 16ರ ಘಟ್ಟದಲ್ಲಿ ಜಯ ಗಳಿಸಿದರು.

ಪ್ರಿ ಕ್ವಾರ್ಟರ್ ಫೈನಲ್ ಫಲಿತಾಂಶಗಳು: ಸೀನಿಯರ್ ಪುರುಷರು: ಬೆಂಗಳೂರಿನ ಅಭಿನವ್ ಗರ್ಗ್ಗೆ ಪ್ರವರಾರ್ಚಿತ್ ವಿರುದ್ಧ 21–10, 21–14ರಲ್ಲಿ, ಬೆಂಗಳೂರಿನ ರುದ್ರ ಶಾಹಿಗೆ ವೈಭವ್ ವಿರುದ್ಧ 21–15, 21–14ರಲ್ಲಿ, ಬೆಂಗಳೂರಿನ ಶ್ಯಾಮ್ ಬಿಂಡಿಗನವಿಲೆಗೆ ಧ್ಯಾನ್ ಸಂತೋಷ್ ವಿರುದ್ಧ 21–12, 21–17ರಲ್ಲಿ, ಬೆಂಗಳೂರಿನ ಲಾಲ್ ಸಾಯ್ಗೆ ಅನಿರುದ್ಧ ದೇಶಪಾಂಡೆ ವಿರುದ್ಧ 17–21, 21–17, 22–20ರಲ್ಲಿ, ಬೆಂಗಳೂರಿನ ಶ್ರೀಕರ್ ರಾಜೇಶ್ಗೆ ಆದಿತ್ಯ ದಿವಾಕರ್ ವಿರುದ್ಧ 21–17, 21–16ರಲ್ಲಿ, ಬೆಂಗಳೂರಿನ ನಿಕೋಲಸ್ ರಾಜ್ಗೆ ಸಹರ್ಷ್ ಪ್ರಭು ವಿರುದ್ಧ 21–9, 21–19ರಲ್ಲಿ, ಬೆಂಗಳೂರಿನ ತುಷಾರ್ ಸುವೀರ್ಗೆ ಪ್ರಣವ್ ವಿರುದ್ಧ 21–13, 21–16ರಲ್ಲಿ, ಬೆಂಗಳೂರಿನ ನರೇನ್ ಐಯ್ಯರ್ಗೆ ವಿಶಾಲ್ ವಿರುದ್ಧ 19–21, 21–9, 21–14ರಲ್ಲಿ ಜಯ. 19 ವರ್ಷದೊಳಗಿನ ಪುರುಷರು: ಬೆಂಗಳೂರಿನ ಅಭಿನವ್ ಗರ್ಗ್ಗೆ ರೋಹನ್ ಶ್ರೀಸಾಯ್ ವಿರುದ್ಧ 21–13, 21–12ರಲ್ಲಿ, ಬೆಂಗಳೂರಿನ ನಿಶ್ಚಲ್ಗೆ ಮಯೂಖ್ ವಿರುದ್ಧ 21–19, 16–21, 21–19ರಲ್ಲಿ, ಬೆಂಗಳೂರಿನ ಕೌಶಿಕ್ ರೆಡ್ಡಿಗೆ ಧ್ಯಾನ್ ಸಂತೋಷ್ ವಿರುದ್ಧ 19–21, 21–16, 23–21ರಲ್ಲಿ, ಬೆಂಗಳೂರಿನ ಹಾರ್ದಿಕ್ ದಿವ್ಯಾಂಶ್ಗೆ ಭವೇಶ್ ವಿರುದ್ಧ 21–8, 21–11ರಲ್ಲಿ, ಬೆಂಗಳೂರಿನ ಪ್ರಣಯ್ಗೆ ಪೀಯೂಷ್ ತ್ರಿಪಾಠಿ ವಿರುದ್ಧ 21–15, 21–13ರಲ್ಲಿ, ಬೆಂಗಳೂರಿನ ಪ್ರದ್ಯೋತ್ ರವಿಗೆ ರಿಶೋನ್ ಜೆರಿನ್ ವಿರುದ್ಧ 21–12, 21–16ರಲ್ಲಿ, ಬೆಂಗಳೂರಿನ ಶ್ಯಾಂ ಬಿಂಡಿಗನವಿಲೆಗೆ ಸುಬುದ್ಧ್ ವಿರುದ್ಧ 21–9, 21–12ರಲ್ಲಿ, ಬೆಂಗಳೂರಿಗೆ ಓಂಕಾರಗೆ ಯಶಸ್ ರೆಡ್ಡಿ ವಿರುದ್ಧ 21–17, 21–18ರಲ್ಲಿ ಗೆಲುವು.

ಸೀನಿಯರ್ ಮಹಿಳೆಯರು: ಬೆಂಗಳೂರಿನ ಅಶ್ವತಿ ವರ್ಗೀಸ್ಗೆ ಅನನ್ಯಶ್ರೀ ವಿರುದ್ಧ 21–12, 21–19ರಲ್ಲಿ, ಬೆಂಗಳೂರಿನ ಮುಸ್ಕಾನ್ ಖಾನ್ಗೆ ಹಾರಿತಾ ವಿರುದ್ಧ 21–13, 21–11ರಲ್ಲಿ, ಹಿತೈಶ್ರೀಗೆ ವಿಜೇತಾ ವಿರುದ್ಧ 21–15, 16–21, 21–7ರಲ್ಲಿ, ಬೆಂಗಳೂರಿನ ಪ್ರೆರಣಾ ಶೇಟ್ಗೆ ಅದಿತಿ ಆಚಾರ್ಯ ವಿರುದ್ಧ 21–15, 21–7ರಲ್ಲಿ, ದಿಶಾ ಸಂತೋಷ್ಗೆ ಬನಶ್ರೀ ಪಾಟೀಲ ವಿರುದ್ಧ 21–15, 21–9ರಲ್ಲಿ, ಬೆಂಗಳೂರಿನ ಶೈನಾ ಮಣಿಮುತ್ತುಗೆ ಅಖಿಲಾ ಆನಂದ್ ವಿರುದ್ಧ 21–8, 21–11ರಲ್ಲಿ, ಬೆಂಗಳೂರಿನ ಆಶಿ ದಾಸ್ಗೆ ಕಾಮಾಕ್ಯ ರೆಡ್ಡಿ ವಿರುದ್ಧ 21–19, 21–17ರಲ್ಲಿ, ಬೆಂಗಳೂರಿನ ಲಕ್ಷ್ಯಾ ರಾಜೇಶ್ಗೆ ಪ್ರಾಪ್ತಿ ಕುಮಾರ್ ವಿರುದ್ಧ 21–15, 10–21, 22–20ರಲ್ಲಿ ಗೆಲುವು. 19 ವರ್ಷದೊಳಗಿನ ಮಹಿಳೆಯರು: ಬೆಂಗಳೂರಿನ ದಿಯಾ ಭೀಮಯ್ಯಗೆ ಅನನ್ಯಶ್ರೀ ಮುರಳಿ ವಿರುದ್ಧ 21–17, 21–17ರಲ್ಲಿ, ಬೆಂಗಳೂರಿನ ತಾನಿಕಾ ಮೋಹನ್ಗೆ ರಚನಾ ವಿರುದ್ಧ 21–16, 21–19ರಲ್ಲಿ, ಬೆಂಗಳೂರಿನ ನವ್ಯಾ ಕೊಲ್ಲೂರಿಗೆ ಇಶಿಕಾ ವಿರುದ್ಧ 21–19, 21–10ರಲ್ಲಿ, ಬೆಂಗಳೂರಿನ ಬನಶ್ರೀ ಪಾಟೀಲಗೆ ಅನ್ವಿತಾ ವಿಜಯ್ ವಿರುದ್ಧ 21–15, 21–18ರಲ್ಲಿ, ಬೆಂಗಳೂರಿನ ಶೈನಾ ಮಣಿಮುತ್ತುಗೆ ಹಾರಿತಾ ಸತೀಶ್ ವಿರುದ್ಧ 21–11, 21–6ರಲ್ಲಿ, ಬೆಂಗಳೂರಿನ ನಿಧಿ ಆತ್ಮಾರಾಮ್ಗೆ ಕಾಮಾಕ್ಯ ರೆಡ್ಡಿ ವಿರುದ್ಧ 26–24, 21–12ರಲ್ಲಿ, ಬೆಂಗಳೂರಿನ ಪ್ರಾಪ್ತಿ ಕುಮಾರ್ಗೆ ಕೀರ್ತಿ ಬಾಲಾಜಿ ವಿರುದ್ಧ 21–9, 21–7ರಲ್ಲಿ, ಬೆಂಗಳೂರಿನ ಹಿತೈಶ್ರೀ ರಾಜಯ್ಯಗೆ ಆಶಿ ದಾಸ್ ವಿರುದ್ಧ 21–11, 21–15ರಲ್ಲಿ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.