ಮಂಗಳೂರು: ತೆರೆಗೆ ಬರಲು ‘ಕೊರಗಜ್ಜ’ ಚಿತ್ರ ಸಿದ್ಧವಾಗಿದ್ದು, ಚಿತ್ರ ತಂಡದಿಂದ ಇಲ್ಲಿಯ ಮಾರ್ನಮಿಕಟ್ಟೆಯಲ್ಲಿ ಕೋಲ ಸೇವೆ ನಡೆಯಿತು.

ಇದಕ್ಕೂ ಮೊದಲು ಬೆಳಿಗ್ಗೆ ಸಿನಿಮಾ ಸಂಗೀತ ಬಿಡುಗಡೆಗೊಳಿಸಲಾಯಿತು.

‘ಕೊರಗಜ್ಜ’ ಚಿತ್ರ ಆರು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ ಈಚೆಗೆ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದರು.

‘ಮೂರು ವರ್ಷಗಳ ಹಿಂದೆ ಆರಂಭವಾದ ಸಿನಿಮಾ ಕೊರಗಜ್ಜನ ಆಶೀರ್ವಾದದಿಂದ ಅತ್ಯುತ್ತಮವಾಗಿ ಬಂದಿದೆ. ಚಿತ್ರದಲ್ಲಿ ಆರು ಭಾಷೆಗಳಿಂದ ಒಟ್ಟು 31 ಹಾಡುಗಳಿವೆ. ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ಧ ಗಾಯಕ - ಗಾಯಕಿಯರು ಹಾಡಿದ್ದಾರೆ. ಸಿನಿಮಾದ ಸಂಗೀತ ಹಕ್ಕನ್ನು ಝೀ ಮ್ಯೂಸಿಕ್ ಖರೀದಿಸಿದೆ. ಸುಮಾರು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ’ ಎಂದು ಚಿತ್ರತಂಡದವರು ತಿಳಿಸಿದರು.

ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಬೀರ್ ಬೇಡಿ, ಶ್ರುತಿ, ಭವ್ಯ ಮುಂತಾದವರು ಪಾಲ್ಗೊಂಡಿದ್ದರು.

2019–20ರ ಅವಧಿಯಲ್ಲೇ ಕೊರಗಜ್ಜ ಸಿನಿಮಾ ಮಾಡಲು ಮುಂದಾಗಿದ್ದೆವು. ಅದು ಕೈಗೂಡಲಿಲ್ಲ. ತ್ರಿವಿಕ್ರಮ ಅವರು ನಿರ್ಮಿಸಿದ್ದು, ಅವರಿಗೆ ಒಳ್ಳೆಯದಾಗಲಿ’ ಎಂದು ನಿರ್ಮಾಪಕ ಜೈಜಗದೀಶ್, ವಿಜಯಲಕ್ಷ್ಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.