ಉಳ್ಳಾಲ: ಕೋಟೆಕಾರಿನ ಮಾಡೂರಿನಲ್ಲಿ ಅಂಚೆ ಕಚೇರಿಯ ನೂತನ ಶಾಖೆಯನ್ನು ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಉದ್ಘಾಟಿಸಿದರು.

ಅಂಚೆ ಇಲಾಖೆಯು ವೃದ್ಧರ, ಅಶಕ್ತರ, ಮಹಿಳೆಯರ, ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದು, ಮಾಡೂರಿನ ಹೊಸ ಅಂಚೆ ಕಚೇರಿಯ ಸೇವೆಯನ್ನು ನಿವಾಸಿಗಳು ಬಳಸಿಕೊಳ್ಳಬೇಕು ಎಂದರು.

ಅತಿಥಿಯಾಗಿದ್ದ ಮುಖಂಡ ನಳಿನ್ ಕುಮಾರ್ ಕಟೀಲ್, ಅಂಚೆ ಕಚೇರಿಗಳು ಆಧುನಿಕ ತಂತ್ರಜ್ಞಾನದೊಂದಿಗೆ ಜನ ಸಾಮಾನ್ಯರ ಮನೆ ಬಾಗಿಲಿಗೆ ಅಗತ್ಯ ಸೇವೆ ಒದಗಿಸುತ್ತಿವೆ ಎಂದರು.

ಮಾಡೂರಿನ ನೂತನ ಅಂಚೆ ಕಚೇರಿಯ ಶಾಖೆಯಲ್ಲಿ ಅಂಚೆ ಉಳಿತಾಯ ಖಾತೆ, ಅಂಚೆ ಜೀವವಿಮೆ, ನಾಗರಿಕ ಕೇಂದ್ರಿತ ಸೇವೆಗಳು, ಆಧಾರ್ ಸೇವೆಗಳು, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳನ್ನು ಬಳಸಿಕೊಳ್ಳಬಹುದು ಎಂದು ಅಂಚೆ ಕಚೇರಿಯ ಹಿರಿಯ ಅಧೀಕ್ಷಕ ಎಂ.ಸುಧಾಕರ ಮಲ್ಯ ತಿಳಿಸಿದರು.

ಮಾಡೂರು ಪರಿಸರದ ಜನ ಅಂಚೆ ಕಚೇರಿಗಾಗಿ ಕೊಲ್ಯಕ್ಕೆ ತೆರಳಬೇಕಿತ್ತು. ಕೊಲ್ಯದ ಅಂಚೆ ಕಚೇರಿಯು ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದು, ವೃದ್ಧರು, ಅಂಗವಿಕಲರು ಮಹಡಿ ಮೆಟ್ಟಿಲು ಹತ್ತಲು ಕಷ್ಟ ಪಡುತ್ತಿದ್ದರು. ನಳಿನ್ ಕುಮಾರ್ ಕಟೀಲ್ ಅವರ ಸಹಕಾರದಿಂದ ಇದೀಗ ಮಾಡೂರಿನಲ್ಲೇ ಅಂಚೆ ಶಾಖೆಯ ಕಚೇರಿ ಉದ್ಘಾಟನೆಗೊಂಡಿದೆ. ಮುಂದಿನ ದಿನಗಳಲ್ಲಿ ಈ ಶಾಖೆಯನ್ನು ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು ಎಂದು ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಸುಜಿತ್ ತಿಳಿಸಿದರು.

ಉದ್ಯಮಿ ಉದಯ್ ಕುಮಾರ್ ಭಾಗವಹಿಸಿದ್ದರು. ಉಪ ಅಂಚೆ ಕಚೇರಿ ಅಧೀಕ್ಷಕ ಪಿ.ದಿನೇಶ್ ಸ್ವಾಗತಿಸಿದರು. ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ ವಂದಿಸಿದರು. ದಯಾನಂದ ಕತ್ತಲ್ ಸಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.