ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ-ರಾಮನಗರ: ಮನೆಯ ಆವರಣ ಗೋಡೆ ಕುಸಿತ

Published 9 ಜೂನ್ 2024, 14:24 IST
Last Updated 9 ಜೂನ್ 2024, 14:24 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಹಿರೇಬಂಡಾಡಿ-ಕೊಯಿಲ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಹಾದು ಹೋಗುವ ರಾಮನಗರ ಪರಿಸರದಲ್ಲಿ ಮನೆಯೊಂದರ ಆವರಣ ಗೋಡೆ ಕುಸಿದು ರಸ್ತೆಗೆ ಬಿದ್ದಿದೆ.

ರಾಮನಗರ ನಿವಾಸಿ ಯು.ಟಿ.ಜಮೀಳಾ ಎಂಬುವರ ಜಾಗ ರಸ್ತೆಯ ಬದಿ ಇದ್ದು, ಹೆದ್ದಾರಿ ಕಾಮಗಾರಿ ನಡೆಸುವವರು ಆವರಣ ಗೋಡೆಯ ಅಡಿ ಭಾಗದಿಂದ ಮಣ್ಣು ತೆಗೆದಿದ್ದು, ಅದನ್ನು ಹಾಗೆ ಬಿಟ್ಟಿದ್ದರು. 3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣ ಗೋಡೆ ಕುಸಿದು ಬಿದ್ದಿದೆ. ಅವರ ತೋಟದ ಬಳಿ ಹೆದ್ದಾರಿಗೆ ಅಡ್ಡಲಾಗಿ ಮೋರಿ ಅಳವಡಿಸಿ ಆ ಭಾಗದ ನೀರನ್ನು ಅವರ ತೋಟಕ್ಕೆ ಬಿಡಲಾಗಿದ್ದು, ಇದರಿಂದಾಗಿ ಕೃಷಿ ನಾಶಕ್ಕೂ ಕಾರಣವಾಗಿದೆ.

ಇದೇ ರಸ್ತೆ ಬದಿಯಲ್ಲಿ 4 ಕಡೆ ಆವರಣ ಗೋಡೆ ಕುಸಿಯುವ ಹಂತದಲ್ಲಿದೆ. ಉಪ್ಪಿನಂಗಡಿಯ ಶಾಲೆ, ಕಾಲೇಜಿಗೆ ಹೋಗುವ ಈ ಭಾಗದ ಮಕ್ಕಳು, ಸಾರ್ವಜನಿಕರು ಈ ಮಾರ್ಗದ ಮೂಲಕ ನಡೆದುಕೊಂಡು ಹೋಗುತ್ತಿದ್ದು ಅವರಲ್ಲಿ ಆತಂಕ ಉಂಟಾಗಿದೆ.

ರಸ್ತೆ ಅಭಿವೃದ್ಧಿಗಾಗಿ ನಮ್ಮ ಪಟ್ಟಾ ಭೂಮಿಯಲ್ಲಿ ಸುಮಾರು 20 ಸೆಂಟ್ಸ್‌ ಜಾಗವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಿಟ್ಟು ಕೊಟ್ಟಿದ್ದೇವೆ. ಚರಂಡಿ ನಿರ್ಮಿಸುವಾಗ ಮನೆಯ ಆವರಣ ಗೋಡೆಯ ಅಡಿ ಭಾಗದಿಂದ ಮಣ್ಣು ತೆಗೆಯುವಾಗ ಆಕ್ಷೇಪ ವ್ಯಕ್ತಪಡಿಸಿದಾಗ, ನಾವು ಇದನ್ನು ಸರಿ ಮಾಡಿಕೊಡುತ್ತೇವೆ ಎಂದಿದ್ದರು. ಆದರೂ ಗುತ್ತಿಗೆದಾರರು ಸ್ಪಂದಿಸಿಲ್ಲ. ಆವರಣ ಗೋಡೆ ಬಿದ್ದು ಅನಾಹುತ ಉಂಟಾದರೆ ಯಾರು ಹೊಣೆ ಎಂದು ಜಮೀಳಾ ಅವರ ಸಹೋದರ ಯು.ಟಿ.ಮುಸ್ತಾಫ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT