ಬುಧವಾರ, ಏಪ್ರಿಲ್ 21, 2021
23 °C

ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಸೀಮಿತ ಸಂಖ್ಯೆಯ ಬಸ್ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಮಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ 15 ಬಸ್‌ಗಳನ್ನು ಗುರುವಾರ ಬೆಳಿಗ್ಗೆ ಬಿಡಲಾಗಿದೆ.

ನೌಕರರ ಮುಷ್ಕರದ ಪರಿಣಾಮ ಬುಧವಾರ ಯಾವುದೇ ಬಸ್‌ ಸಂಚಾರ ನಡೆಸಲಿಲ್ಲ. ಈ ನಡುವೆ ವಿಭಾಗದ ಅಧಿಕಾರಿಗಳು ನೌಕರರ ಸತತ ಮನವೊಲಿಕೆ ನಡೆಸಿ, 15 ಬಸ್‌ಗಳನ್ನು ಗುರುವಾರ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ನೌಕರರ ಮನವೊಲಿಕೆ ಮಾಡಿ 15 ಬಸ್‌ಗಳ ಸಂಚಾರ ಆರಂಭಿಸಿದ್ದೇವೆ. ಸಂಜೆ ವೇಳೆಗೆ ಇನ್ನಷ್ಟು ನೌಕರರು ಸೇವೆಗೆ ಬರುವ ವಿಶ್ವಾಸ ಇದೆ’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್. ಅರುಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರವಿದ್ದು, ಇಲ್ಲದ ಮಾರ್ಗಗಳಲ್ಲಿ ಖಾಸಗಿ ಬಸ್‌, ಕಾಂಟ್ರ್ಯಾಕ್ಟ್ ಕ್ಯಾರೇಜ್, ಮ್ಯಾಕ್ಸಿ ಕ್ಯಾಬ್ ಮತ್ತಿತರ ವಾಹನಗ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಹೊರ ಜಿಲ್ಲೆ ಹಾಗೂ ಕೆಲವು ಮಾರ್ಗದ ಪ್ರಯಾಣಿಕರು ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡಬೇಕಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.