ಮಂಗಳೂರು: ನಗರದ ಬಂದರಿನ ಅಜೀಜುದ್ದೀನ್ ರಸ್ತೆಯ ಬಳಿ ಇರುವ ‘ಸೀ ಫೋರ್ಟ್ ಗೆಸ್ಟ್ ಹೌಸ್’ ವಸತಿಗೃಹದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಶ್ರೀಕರ್ ಸಾಹು ಎಂದು ಗುರುತಿಸಲಾಗಿದೆ. ಈ ಬಗ್ಗೆ ವಸತಿಗೃಹದ ಸ್ವಾಗತಕಾರ ಬಿ.ಜಿ ಮೊಹಮ್ಮದ್ ನಿಫಾತ್ ಎಂಬುವರು ದೂರು ನೀಡಿದ್ದು, ನಗರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಜಯ ಕುಮಾರ್ ಫರೀದ ಮತ್ತು ಶ್ರೀಕರ್ ಸಾಹು ಅವರು ವಸತಿಗೃಹದಲ್ಲಿ ಭಾನುವಾರ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದರು. ಅಜಯ ಕುಮಾರ್ ಪರೀದ ಅದೇ ದಿನ ರಾತ್ರಿ ವಸತಿಗೃಹದಿಂದ ಹೊರಗಡೆ ಹೋಗಿ, ಮರುದಿನ ಬೆಳಿಗ್ಗೆ ಒಬ್ಬ ಯುವಕನೊಂದಿಗೆ ಮರಳಿದ್ದರು. ಎರಡು ಮೂರು ನಿಮಿಷಗಳ ಬಳಿಕ ಆ ಯುವಕನೊಂದಿಗೆ ಅಜಯ್ ಮತ್ತೆ ವಸತಿಗೃಹದಿಂದ ತೆರಳಿದ್ದು, ಬಳಿಕ ವಾಪಾಸ್ ಬಂದಿಲ್ಲ. ಅಂದು ರಾತ್ರಿ ಬಿ.ಜಿ ಮೊಹಮ್ಮದ್ ನಿಫಾತ್ ಅವರು ಬಾಡಿಗೆ ಹಣ ಕೇಳಲು ಕೊಠಡಿಗೆ ಹೋದಾಗ ಮಂಚದ ಮೇಲೆ ಶ್ರೀಕರ ಸಾಹು ಬಟ್ಟೆ ಧರಿಸದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಶ್ರೀಕರ್ ಸಾಹು ಅವರನ್ನು ಯಾರೋ ಕೊಲೆ ಮಾಡಿರಬಹುದು. ಅಥವಾ ಬೇರಾವುದೋ ಕಾರಣಗಳಿಂದ ಅವರು ಮೃತಪಟ್ಟಿರುವ ಸಾಧ್ಯತೆಯೂ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.