ಉಳ್ಳಾಲ (ದಕ್ಷಿಣ ಕನ್ನಡ): ಶುಕ್ರವಾರ ಇಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಪೂಜಾರಿ ಅವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಅಪಾಯದಲ್ಲಿರುವ ಮನೆಗಳ ಸದಸ್ಯರನ್ನು ತಕ್ಷಣಕ್ಕೆ ಸ್ಥಳಾಂತರಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಒತ್ತಾಯಿಸಿದರು.
.Mangaluru Rains: ಪುತ್ತೂರಿನ ಬೆಳಂದೂರು ಗ್ರಾಮದಲ್ಲಿ 48 ಸೆಂ.ಮೀ. ಮಳೆ.
ಮೊಂಟೆಪದವು ಪಂಬದಹಿತ್ತಿಲು ಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಾವನ್ನಪ್ಪಿದ ಅಜ್ಜಿ ಹಾಗೂ ಮೊಮ್ಮಕ್ಕಳಿಬ್ಬರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇದೇ ಕುಟುಂಬದ ಯಜಮಾನ ಕಾಂತಪ್ಪ ಪೂಜಾರಿ, ಎರಡು ಮಕ್ಕಳನ್ನು ಕಳೆದುಕೊಂಡಿರುವ ಅವರ ಸೊಸೆ ಅಶ್ವಿನಿ ಅವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಸರ್ಕಾರದಿಂದ ನೊಂದ ಕುಟುಂಬಕ್ಕೆ ಸಹಕಾರ ಸಿಗಬೇಕಿದೆ. ಮಕ್ಕಳಿಬ್ಬರನ್ನು ಕಳೆದುಕೊಂಡ ತಾಯಿ ಕಾಲುಗಳನ್ನು ಕಳೆದುಕೊಂಡಿರುವುದು ಅತೀವ ದುಃಖದ ಸಂಗತಿ. ಮಳೆಯಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿರುತ್ತವೆ. ಜಿಲ್ಲಾಡಳಿತ, ಸರ್ಕಾರ ಜನರ ರಕ್ಷಣೆಗೆ ಸನ್ನದ್ಧವಾಗಿರಬೇಕು. ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರವನ್ನು ಕುಟುಂಬಕ್ಕೆ ಒದಗಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್, ಕ್ಷೇತ್ರ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಹೇಮಂತ್ ಶೆಟ್ಟಿ, ಸುರೇಶ್ ಆಳ್ವ ತಲಪಾಡಿ ಮೊದಲಾದವರು ಇದ್ದರು.
.Mangaluru Rains: ಮಳೆಗೆ ದಕ್ಷಿಣ ಕನ್ನಡದ ಅಲ್ಲಲ್ಲಿ ಗುಡ್ಡ ಕುಸಿತ.
ಅಜ್ಜಿ ಮೊಮ್ಮಕ್ಕಳ ಅಂತಿಮ ಸಂಸ್ಕಾರ

ಮಳೆ ದುರಂತದಿಂದ ಸಾವನ್ನಪ್ಪಿದ ಅಜ್ಜಿ ಪ್ರೇಮಾ, ಮಕ್ಕಳಾದ ಆರ್ಯನ್, ಆರುಷ್ ಅಂತಿಮ ಸಂಸ್ಕಾರ ದುರಂತ ಘಟಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಇರುವ ಖಾಲಿ ಜಾಗದಲ್ಲಿ ನಡೆಯಿತು. ಮಕ್ಕಳಿಬ್ಬರನ್ನು ಮಣ್ಣಿನಲ್ಲಿ ಹೂಳಲಾಯಿತು. ಪ್ರೇಮಾ ಅವರ ಅಂತಿಮ ಸಂಸ್ಕಾರವೂ ಇದೇ ಸ್ಥಳದಲ್ಲೇ ನಡೆಯಿತು. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
.Mangaluru|ಮೊಂಟೆಪದವು: ಮನೆ ಕುಸಿದು ಮಹಿಳೆ ಸಾವು, ಮಣ್ಣಿನಡಿ ಸಿಲುಕಿರುವ ಮೂವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.