ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಹೋಂ ಸ್ಟೇ ದಾಳಿ ಪ್ರಕರಣದ ತೀರ್ಪು ಪ್ರಕಟ: ಎಲ್ಲ 39 ಆರೋಪಿಗಳು ಖುಲಾಸೆ

Published 6 ಆಗಸ್ಟ್ 2024, 23:33 IST
Last Updated 6 ಆಗಸ್ಟ್ 2024, 23:33 IST
ಅಕ್ಷರ ಗಾತ್ರ

ಮಂಗಳೂರು: ನಗರ ಹೊರವಲಯದ ಪಡೀಲ್‌ನ ‘ಮಾರ್ನಿಂಗ್ ಮಿಸ್ಟ್‌’ ಹೋಂ ಸ್ಟೇಗೆ ನುಗ್ಗಿ ಐವರು ವಿದ್ಯಾರ್ಥಿನಿಯರು ಸೇರಿದಂತೆ 14 ಮಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ 39 ಆರೋಪಿಗಳನ್ನು ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಮಂಗಳವಾರ ಖುಲಾಸೆಗೊಳಿಸಿದೆ.

2012ರ ಜುಲೈ 28ರಂದು ಮುಸ್ಸಂಜೆ ವೇಳೆ ಸಂತೋಷ ಕೂಟದಲ್ಲಿ ಪಾಲ್ಗೊಂಡಿದ್ದ ಯುವಕ–ಯುವತಿಯರ ಮೇಲೆ 40ಕ್ಕೂ ಹೆಚ್ಚು ಮಂದಿ ಇದ್ದ ಯುವಕರ ಗುಂಪು ಹಲ್ಲೆ ನಡೆಸಿತ್ತು. ‘ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಲಾಗಿತ್ತು. ಹಲ್ಲೆ ನಡೆಸಿದ ದೃಶ್ಯಗಳು ‌ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುವ ಮೂಲಕ ಈ ಪ್ರಕರಣ ದೇಶದಾದ್ಯಂತ ಗಮನ ಸೆಳೆದಿತ್ತು. ಪೊಲೀಸರು 43 ಆರೋಪಿಗಳನ್ನು ಬಂಧಿಸಿದ್ದರು.

ತನಿಖಾಧಿಕಾರಿಯಾಗಿದ್ದ ಸಹಾಯಕ ಪೊಲೀಸ್‌ ಕಮಿಷನರ್‌ ಟಿ.ಆರ್‌. ಜಗನ್ನಾಥ್‌ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 , 324ರ ಅಡಿ ಆರೋಪಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಕಾಂತರಾಜು ಎಸ್‌.ವಿ ಅವರು ಈ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಮಾಡಿದರು.

ಘಟನೆಯ ಮುಖ್ಯಾಂಶಗಳು

  • 2012 ಜುಲೈ 28: 43 ಮಂದಿ ಪಡೀಲ್‌ ಮಾರ್ನಿಂಗ್ ಮಿಸ್ಟ್‌ ಹೋಂ ಸ್ಟೇಗೆ ದಾಳಿ ನಡೆಸಿ, ಐವರು ಯುವತಿಯರು ಸಹಿತ 14 ಮಂದಿ ಮೇಲೆ ಹಲ್ಲೆ ನಡೆಸಿದ್ದರು.

  • ಈ ಪ್ರಕರಣದ ವಿಚಾರಣೆ ಆರಂಭವಾಗುವ ಮುನ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಬಾಲಕನನ್ನು ಬಾಲನ್ಯಾಯ ಮಂಡಳಿಗೆ ಹಸ್ತಾಂತರಿಸಲಾಗಿತ್ತು.

  • 2012ರ ಸೆ. 22 ರಂದು 42 ಆರೋಪಿಗಳ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿತ್ತು.

  • 42 ಆರೋಪಿಗಳಿಗೆ ವರ್ಷದವರೆಗೆ ಜಾಮೀನು ಸಿಕ್ಕಿರಲಿಲ್ಲ.

  • 42 ಆರೋಪಿಗಳಲ್ಲಿ ನಿತಿನ್ ಪೂಜಾರಿ (22), ಪ್ರಕಾಶ್ (33) ಹಾಗೂ ಮಹೇಶ್‌ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT