ಹೊಯ್ಗೆಬಜಾರ್ ರೈಲ್ವೆ ಗೇಟ್‌ನ ಎರಡೂ ಕಡೆಗಳಲ್ಲಿ ವಾಹನಗಳು ನಿಂತಿರುವುದು
ರೈಲ್ವೆ ಇಲಾಖೆಯವರು ರೈಲು ಬರುವ ಪೂರ್ವದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ರೈಲ್ವೆ ಗೇಟ್ ಬಂದ್ ಆಗಿ ತೆರೆಯುವ ವೇಳೆ ಸಂಚಾರ ಪೊಲೀಸರು ಇದ್ದು ವಾಹನ ದಟ್ಟಣೆ ನಿಯಂತ್ರಿಸಿದರೆ ಸ್ಥಳೀಯರಿಗೆ ತುಂಬಾ ಅನುಕೂಲ.
ಕೆ.ಜೆ. ಪಿಂಟೊ ಸ್ಥಳೀಯ ನಿವಾಸಿ
ಕೆ.ಜೆ. ಪಿಂಟೊ
‘ಕಾಲುದಾರಿಗಳಿಗೆ ಕಾಂಕ್ರೀಟ್’
ಪೋರ್ಟ್ ವಾರ್ಡ್‌ನಲ್ಲಿ ನಮ್ಮ ಕ್ಲಿನಿಕ್ ಅಂಗನವಾಡಿ ಪ್ರಾರಂಭಿಸಲಾಗಿದೆ. ಕಾಲು ದಾರಿಗಳಿಗೆ ಕಾಂಕ್ರೀಟ್ ಹಳೆಯದಾದ ವಿದ್ಯುತ್ ದೀಪದ ಕಂಬಗಳನ್ನು ಬದಲಿಸುವ ಜೊತೆಗೆ ಎಲ್‌ಇಡಿ ದೀಪ ಹಾಕಲಾಗಿದೆ. ಹಳೆಯದಾಗಿದ್ದ ಒಳಚರಂಡಿ ಪೈಪ್‌ಗಳನ್ನು ಕೆಲವು ಕಡೆಗಳಲ್ಲಿ ಬದಲಿಸಲಾಗಿದೆ. ಶೇ 98ರಷ್ಟು ರಸ್ತೆಗಳು ಕಾಂಕ್ರೀಟ್ ಅಥವಾ ಡಾಂಬರ್ ಹೊದ್ದುಕೊಂಡಿವೆ. ತಾಂತ್ರಿಕ ಕಾರಣದಿಂದ ಸುಭಾಸ್ ನಗರದ ಒಂದು ಕಡೆ ಮಾತ್ರ ರಸ್ತೆ ನಿರ್ಮಾಣ ವಿಳಂಬವಾಗಿದೆ ಎಂದು ವಾರ್ಡ್‌ನ ನಿಕಟಪೂರ್ವ ಸದಸ್ಯ ಅಬ್ದುಲ್ ಲತೀಫ್ ಪ್ರತಿಕ್ರಿಯಿಸಿದರು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ವಾರ್ಡ್‌ನಲ್ಲಿ ಸಭಾ ವೇದಿಕೆ ನಿರ್ಮಿಸಲಾಗಿದೆ. ಹಳೆಯದಾದ ಅಲ್ಬುಕರ್ಕ್ ಸೇತುವೆ ಮರು ನಿರ್ಮಾಣಕ್ಕೆ ಹಿಂದೆ ಮಾಡಿದ ಪ್ರಯತ್ನದ ಫಲವಾಗಿ ಈಗ ಟೆಂಡರ್ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದರು.