ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ‘ಪಿಂಚಣಿ ದೊರೆಯದಿದ್ದರೆ ಕಾನೂನು ಹೋರಾಟ’

Published 3 ಸೆಪ್ಟೆಂಬರ್ 2024, 15:50 IST
Last Updated 3 ಸೆಪ್ಟೆಂಬರ್ 2024, 15:50 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರ್ನಾಲ್ಕು ದಶಕ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ 30 ಸಿಬ್ಬಂದಿಗೆ ಪಿಂಚಣಿ ಹಾಗೂ ಇನ್ನಿತರ ಭತ್ಯೆಯ ಮೊತ್ತ ಒಟ್ಟು ₹23 ಕೋಟಿ ನೀಡುವುದು ಬಾಕಿ ಇದ್ದು, ಇನ್ನು 10 ದಿನಗಳ ಒಳಗೆ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ವಿವಿ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ದಿನೇಶ್ ಕುಮಾರ್ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘20 ಪ್ರಾಧ್ಯಾಪಕರು, 10 ಬೋಧಕೇತರ ಸಿಬ್ಬಂದಿಗೆ ವಿವಿಯು ಗ್ರ್ಯಾಚುಟಿ, ಪಿಂಚಣಿ ಸೇರಿದಂತೆ ಭತ್ಯೆ ನೀಡುವುದು ಬಾಕಿ ಇದೆ. ನಿವೃತ್ತರ ಬದುಕು ಕಷ್ಟವಾಗಿದ್ದು, ಕೆಲವರಿಗೆ ತೀವ್ರತರದ ಆರೋಗ್ಯ ಸಮಸ್ಯೆಯೂ ಇದೆ. ಹಣಕಾಸಿನ ಕೊರತೆ ಇದೆ ಎಂದು ವಿವಿ ಕಾರಣ ನೀಡುವುದು ಸಮಂಜಸವಲ್ಲ. ನಿವೃತ್ತರಿಗೆ ಸಿಗಬೇಕಾದ ಸೌಲಭ್ಯ ನೀಡುವುದು ವಿವಿ ಹಾಗೂ ಸರ್ಕಾರದ ಕರ್ತವ್ಯ’ ಎಂದರು.

ಈಗಾಗಲೇ ಮಂಗಳ ಅಲುಮ್‌ನೈ ಅಸೋಸಿಯೇಷನ್ (ಮಾ) ವತಿಯಿಂದ ರಾಜ್ಯಪಾಲರು, ಕುಲಪತಿ, ಉನ್ನತ ಶಿಕ್ಷಣ ಸಚಿವರು, ವಿಧಾನಸಭೆ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಎರಡು ವರ್ಷಗಳಿಂದ ವಿವಿಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎನ್ನಲಾಗುತ್ತಿದ್ದು, ಮುಂದಿನ ತಿಂಗಳುಗಳಿಂದ ತಿಂಗಳ ಪಿಂಚಣಿ ಸಿಗುವುದು ಕಷ್ಟ ಎಂಬ ಮಾಹಿತಿ ಲಭ್ಯವಾಗಿದೆ. ಅತಿಥಿ ಉಪನ್ಯಾಸಕರು, ಸಿಬ್ಬಂದಿಗೆ 3–4 ತಿಂಗಳುಗಳಿಂದ ಗೌರವಧನ ದೊರೆಯುತ್ತಿಲ್ಲ. ಸರ್ಕಾರ ವಿವಿ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಕಾರ್ಯಾಧ್ಯಕ್ಷ ಶ್ರೀಪತಿ ಕಲ್ಲೂರಾಯ, ಉಮ್ಮಪ್ಪ ಪೂಜಾರಿ, ವೇಣು ಶರ್ಮ, ಪ್ರೊ. ಜಯಪ್ಪ, ಪ್ರಭಾಕರ ನೀರುಮಾರ್ಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT