ನವರಾತ್ರಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಮುಖ್ಯ ರಸ್ತೆಗಳ ಪಕ್ಕದಲ್ಲಿ ಬ್ಯಾನರ್‌ಗಳನ್ನು ಅಳವಡಿಸಿ ಶುಭಕೋರುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬರುತ್ತಿದೆ. ಪಾಲಿಕೆಯು ಕೂಡಾ ದಸರಾ ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ವಿದ್ಯುದ್ದೀಪಗಳಿಂದ ಬೀದಿಗಳನ್ನು ಅಲಂಕರಿಸುತ್ತದೆ. ದಸರಾ ಮುಗಿಯುವವರೆಗೂ ಸುಮಾರು ಎರಡು ವಾರ ಕಾಲ ಈ ಬೀದಿ ಅಲಂಕಾರ, ಫ್ಲೆಕ್ಸ್ ಬ್ಯಾನರ್‌ಗಳು ಹಾಗೆಯೇ ಇರುತ್ತವೆ.