ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಎಂಡಿಎಂಎ ವಶ: ಇಬ್ಬರು ಆರೋಪಿಗಳ ಬಂಧನ

Published : 29 ಆಗಸ್ಟ್ 2024, 5:20 IST
Last Updated : 29 ಆಗಸ್ಟ್ 2024, 5:20 IST
ಫಾಲೋ ಮಾಡಿ
Comments

ಮಂಗಳೂರು: ನಿಷೇದಿತ ಮಾದಕ ವಸ್ತು ಎಂಡಿಎಂಎಯನ್ನು ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಲಪಾಡಿ ಬಳಿಯ ಕೆ.ಸಿ.ರೋಡ್‌ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 15 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಮಂಜೇಶ್ವರದ ಪುಚ್ಚಿತ್ ಬೈಲ್ ನಿವಾಸಿ ಅಬ್ದುಲ್ ಸಲಾಂ ಅಲಿಯಾಸ್‌ ಸಲಾಂ (30) ಹಾಗೂ ಸೂರಜ್ ರೈ ಅಲಿಯಾಸ್‌ ಅಂಕಿತ್‌ (26) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ನಗರಕ್ಕೆ ಮಾದಕ ಪದಾರ್ಥ ಕಳ್ಳಸಾಗಿಸುತ್ತಿರುವ ಕುರಿತು ಸಿಸಿಬಿಗೆ ಮಾಹಿತಿ ಇತ್ತು. ತಲಪಾಡಿ ಬಳಿಯ ಕೆ.ಸಿ. ರೋಡ್‌ನಲ್ಲಿ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಅದರಲ್ಲಿ 15 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆರೋಪಿಗಳು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಅದನ್ನು ಸಾಗಿಸುತ್ತಿದ್ದರು. ಕೃತ್ಯಕ್ಕೆ ಬಳಸಿದ ಡಿಯೊ ಸ್ಕೂಟರ್, ಎರಡು ಮೊಬೈಲ್‌ಗಳು, ಡಿಜಿಟಲ್ ತೂಕ ಮಾಪಕಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಸ್ವತ್ತುಗಳ ಮೌಲ್ಯ ₹ 1.65 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದು ತಿಳಿಸಿದ್ದಾರೆ. 

‘ಮಾದಕ ವಸ್ತು ಸೇವನೆಗೆ ಸಂಬಂಧಿಸಿ ಮಂಜೇಶ್ವರ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣದಲ್ಲಿ ಅಬ್ದುಲ್ ಸಲಾಂ ಆರೋಪಿಯಾಗಿದ್ದ. ಮಾದಕ ವಸ್ತು ಸೇವನೆಗೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸೂರಜ್ ರೈ ಆರೋಪಿಯಾಗಿದ್ದ’ ಎಂದು ಪೊಲೀಸರು ಹೇಳಿದ್ದಾರೆ.  

ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ನಡೆದ ಈ ಪತ್ತೆಕಾರ್ಯದಲ್ಲಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್ ಎಚ್.ಎಂ, ಪಿಎಸ್ಐ ನರೇಂದ್ರ ಮತ್ತು ಸಿಬ್ಬಂದಿ ಭಾವಗಹಿಸಿದ್ದರು. 

ಸೂರಜ್ ರೈ
ಸೂರಜ್ ರೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT