ಮಂಗಳೂರು: ನಗರದ ಗ್ರೀನ್ ಪಾರ್ಕ್ ಮೈದಾನದ ಬಳಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಉತ್ತರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ 3.94 ಗ್ರಾಂ ತೂಕದ ಎಂಡಿಎಂಎ, ಮೊಬೈಲ್, ಕಪ್ಪು ಬಣ್ಣದ ಬ್ಯಾಗ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಮಹಮ್ಮದ್ ಫಾಯಿಕ್ ಬಂಧೀತ ಆರೋಪಿ. ಆತನಿಂದ 2.80 ಗ್ರಾಂ ತೂಕದ ಎಂಡಿಎಂಎ ಹಾಗೂ 2.14 ಗ್ರಾಂ ತೂಕದ ಎಂಡಿಎಂಎ ಇದ್ದ ಎರಡು ಜಿಪ್ ಲಾಕ್ ಪ್ಲಾಸ್ಟಿಕ್ ಪೊಟ್ಟಣಗಳನ್ನು (ಒಟ್ಟು ಅಂದಾಜು ಮೌಲ್ಯ ₹ 45ಸಾವಿರ), ಮೊಬೈಲ್ (ಅಂದಾಜು ಮೌಲ್ಯ ₹ 10 ಸಾವಿರ), ಹಾಗೂ ಪ್ಲಾಸ್ಟಿಕ್ ಪೊಟ್ಟಣಗಳನ್ನು (ಅಂದಾಜು ಮೌಲ್ಯ ₹ 500) ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ..

ಮಾದಕ ಪದಾರ್ಥ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಉತ್ತರ ಠಾಣೆಯ ಪಿಎಸ್ಐ ಫೈಜುನ್ನೀಸಾ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದರು. ಈ ಬಗ್ಗೆ ನಗರ ಉತ್ತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗೆ ಮಹಮ್ಮದ್ ಜುನೈದ್ ಎಂಬಾತ ಮಾದಕ ಪದಾರ್ಥ ಮಾರಾಟ ಮಾಡಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.