ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಷದಲ್ಲಿ ₹ 1.71 ಕೋಟಿ ಮೌಲ್ಯದ ಮಾದಕ ಪದಾರ್ಥ ವಶ

199 ಪೆಡ್ಲರ್‌ಗಳ ಬಂಧನ; ಡ್ರಗ್‌ ಸೇವಿಸಿದ್ದ 749 ಮಂದಿ ವಿರುದ್ಧ ಕ್ರಮ
Published 3 ಜನವರಿ 2024, 17:04 IST
Last Updated 3 ಜನವರಿ 2024, 17:04 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2023ನೇ ಸಾಲಿನಲ್ಲಿ ಒಟ್ಟು ₹ 1.71 ಕೋಟಿ ಮೌಲ್ಯದ ನಿಷೇಧಿತ ಮಾದಕ ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌, ‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮಾದಕ ಪದಾರ್ಥ ಮಾರಾಟ ದಂಧೆಯಲ್ಲಿ ತೊಡಗಿದ್ದ 199 ಪೆಡ್ಲರ್‌ಗಳನ್ನು ಹಾಗೂ ಡ್ರಗ್ಸ್‌ ಸೇವಿಸಿದ್ದ 749 ಮಂದಿಯನ್ನು 2023ರಲ್ಲಿ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಿಷೇಧಿತ ಮಾದಕ ಪದಾರ್ಥ ಜಾಲವನ್ನು ಮಟ್ಟ ಹಾಕುವ ಕಾರ್ಯಾಚರಣೆಯಲ್ಲಿ ಮಾರ್ಪಾಡು ಮಾಡಿದ್ದೇವೆ. ಎಸಿಪಿಗಳ ಹಂತದಲ್ಲಿ ವಿಶೇಷ ತಂಡಗಳನ್ನು ರಚಿಸಿ, ಈ ದಂಧೆಯಲ್ಲಿ ತೊಡಗಿರುವವರ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ. ಈ ಪ್ರಯೋಗ ಹೆಚ್ಚು ಯಶಸ್ವಿಯಾಗಿದೆ. ವರ್ಷದಲ್ಲಿ ನಿಷಧಿತ ಮಾದಕ ಪದಾರ್ಥ ಮಾರಾಟಕ್ಕೆ ಸಂಬಂಧಿಸಿದ 94 ಪ್ರಕರಣಗಳು ಹಾಗೂ ಮಾದಕ ಪದಾರ್ಥ ಸೇವನೆಗೆ ಸಂಬಂಧಿಸಿ 619 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

‘ಮಾದಕ ಪದಾರ್ಥ ಮಾರಾಟ ದಂಧೆ ಹಾಗೂ ಅದನ್ನು ಸೇವಿಸುವವರನ್ನು ಕೇಂದ್ರೀಕರಿಸಿ ಈ ವರ್ಷವೂ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಮುಂದುವರಿಸಲಿದೆ. ನಿಷೇಧಿತ ಡ್ರಗ್ಸ್‌ಗಳನ್ನು ಮಾರಾಟ ಜಾಲದಲ್ಲಿ ತಿಡಗಿರುವವರ ಪತ್ತೆ ಮೇಲೆ ವಿಶೇಷ ನಿಗಾ ಇಟ್ಟಿದ್ದೇವೆ’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯೆಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT