ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕ್ಕೆಗೆ ಬಂದ ನೂತನ ಬಂಡಿರಥ 

Published 21 ಮೇ 2024, 6:16 IST
Last Updated 21 ಮೇ 2024, 6:16 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ಅವರು ಸೇವಾರೂಪದಲ್ಲಿ ಸಮರ್ಪಿಸುವ ನೂತನ ಬಂಡಿ ರಥವು ಮೆರವಣಿಗೆಯೊಂದಿಗೆ ಸೋಮವಾರ ಕುಕ್ಕೆಗೆ ತಲುಪಿತು. ಆನೆ, ಬಿರುದಾವಳಿ ಮತ್ತು ಬ್ಯಾಂಡ್ ವಾದ್ಯಗಳ ನಿನಾದದೊಂದಿಗೆ ರಥವನ್ನು ಸ್ವಾಗತಿಸಲಾಯಿತು.

ರಥವನ್ನು ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಸ್ವಾಗತಿಸಲಾಯಿತು. ಮಹಾಗಣಪತಿಗೆ ಪೂಜೆ ನೆರವೇರಿಸಿದ ಬಳಿಕ ಪುರೋಹಿತ ಪ್ರಸಾದ್ ಕಲ್ಲೂರಾಯ ನೂತನ ಬಂಡಿ ರಥಕ್ಕೆ ಪೂಜೆ ನೆರವೇರಿಸಿದರು. ಬಳಿಕ ದೇವಳದ ಆಡಳಿತಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಎಸ್.ಇಂಜಾಡಿ, ಸೇವಾರ್ಥಿಗಳ ಆಪ್ತರಾದ ಮೋಹನದಾಸ ರೈ, ರಥ ನೀಡುವಲ್ಲಿ ಸಹಕರಿಸಿದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯೆ ವಿಮಲಾ ರಂಗಯ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಭಾಗವಹಿಸಿದ್ದರು.

ಜುಬಿನ್ ಮೊಹಪಾತ್ರ ಮಾತನಾಡಿ, ಸುಬ್ರಹ್ಮಣ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಅವುಗಳ ಅನುಷ್ಠಾನಕ್ಕೆ ದಾನಿಗಳು ಸಹಕರಿಸಿ ಕೊಡುಗೆ ನೀಡಲು ಮುಂದೆ ಬಂದರೆ ಅನುಕೂಲ ಎಂದರು.

ಕ್ಷೇತ್ರದ ಬ್ರಹ್ಮರಥ ಸೇರಿದಂತೆ ಹಲವು ರಥಗಳನ್ನು ನಿರ್ಮಿಸಿದ ರಥಶಿಲ್ಪಿ ಕೋಟೇಶ್ವರದ ರಾಜಗೋಪಾಲ ಆಚಾರ್ಯ ರಥವನ್ನು ಎರಡು ತಿಂಗಳಲ್ಲಿ ನಿರ್ಮಿಸಿಕೊಟ್ಟಿದ್ದಾರೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಹೇಳಿದರು.

ಕಾಶಿಕಟ್ಟೆಯಿಂದ ಮೆರವಣಿಗೆ ಮೂಲಕ ದೇವಳಕ್ಕೆ ಕೊಂಡೊಯ್ಯಲಾಯಿತು. ದೇವಳದ ಗೋಪುರದ ಬಳಿ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಅವರು ರಥಕ್ಕೆ ಪೂಜೆ ನೆರವೇರಿಸಿದರು.

ದೇವರಿಗೆ ಸಮರ್ಪಿಸಲಿರುವ ನೂತನ ಬಂಡಿ ರಥದ ಮೆರವಣಿಗೆ ಸೋಮವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಿತು
ದೇವರಿಗೆ ಸಮರ್ಪಿಸಲಿರುವ ನೂತನ ಬಂಡಿ ರಥದ ಮೆರವಣಿಗೆ ಸೋಮವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT