ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನ ಖರೀದಿಗೆ ₹75 ಕೋಟಿ: ವಿವೇಕ್ ರಾಜ್

ಪನಾಮಾ ನೇಚರ್‌ ಫ್ರೆಶ್‌ನಿಂದ ರೈತರಿಗೆ ಸಹಾಯ
Last Updated 6 ಜೂನ್ 2021, 14:51 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಸಂಕಷ್ಟದ ನಡುವೆ ರಾಜ್ಯದ ಹಲವೆಡೆ ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಹಣ್ಣು, ತರಕಾರಿಗಳನ್ನು ಬೀದಿಗೆ ಎಸೆಯುತ್ತಿದ್ದು, ಅಂತಹ ರೈತರಿಗೆ ಸೂಕ್ತ ಬೆಲೆ ನೀಡಿ ಖರೀದಿಸುವ ಮೂಲಕ ಅವರಿಗೆ ಸಹಾಯ ನೀಡಲು ‘ಪನಮಾ ನೇಚರ್ ಫ್ರೆಶ್’ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಸಂಸ್ಥೆಯು ಹೊಂದಿರುವ 13 ಕ್ಲೈಮೇಟ್ ಕಂಟೇನರ್‌ಗಳ ಮೂಲಕ ರಾಜ್ಯದ ವಿವಿಧ ಭಾಗಗಳ ರೈತರಿಂದ ಹಣ್ಣು, ತರಕಾರಿಗಳನ್ನು ಖರೀದಿಸಲಾಗುವುದು. ಇದಕ್ಕಾಗಿಯೇ ₹75 ಕೋಟಿ ಮೀಸಲಿಡಲಾಗಿದೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ 5 ಸಾವಿರ ಕುಟುಂಬಕ್ಕೆ ಕಿಟ್ ಒದಗಿಸುವ ನಿಟ್ಟಿನಲ್ಲಿ ₹50 ಲಕ್ಷ ಮೀಸಲಿಡಲಾಗಿದೆ. ಒಂದು ಕುಟುಂಬಕ್ಕೆ 15 ದಿನಗಳ ಕಾಲ ಉಪಯೋಗವಾಗಬಲ್ಲ ಕಿಟ್ ಇದಾಗಿದೆ. ಹಲವು ಬಡ ಕುಟುಂಬಗಳ ಆಸ್ಪತ್ರೆ ಚಿಕಿತ್ಸೆಯ ವೆಚ್ಚವನ್ನು ಪನಾಮ ಕಂಪನಿ ವತಿಯಿಂದ ಭರಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT