ಶನಿವಾರ, ಮೇ 30, 2020
27 °C
50 ಜನರಿಗೆ ಮಾತ್ರ ಅವಕಾಶ; ಹಿರಿಯರು, ಮಕ್ಕಳಿಗೆ ನಿಷೇಧ

ಮದುವೆಗೆ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯಲ್ಲಿ ಮದುವೆ ಅಥವಾ ಸಮಾರಂಭಗಳನ್ನು ಆಯೋಜಿಸುವ ಮುನ್ನ ಹಾಗೂ ಸಂಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯಾಡಳಿತಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಷರತ್ತಿಗೆ ಒಳಪಟ್ಟು ಆಯಾ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅನುಮತಿಯನ್ನು ಪಡೆಯಬೇಕು ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಮದನಮೋಹನ್‌ ತಿಳಿಸಿದ್ದಾರೆ.

ವಿವಾಹ ಸಮಾರಂಭಗಳಲಿ ಅತಿಥಿಗಳ ಸಂಖ್ಯೆಯು ಗರಿಷ್ಠ 50ಕ್ಕೆ ಮೀರಬಾರದು. ನೈಸರ್ಗಿಕ ಗಾಳಿ, ಬೆಳಕು ಲಭ್ಯವಿರುವ ಸೂಕ್ತವಾದ ಸಾರ್ವಜನಿಕ ಸ್ಥಳದಲ್ಲಿ ಹಮ್ಮಿಕೊಳ್ಳಬೇಕು. ಹವಾನಿಯಂತ್ರಣ ವ್ಯವಸ್ಥೆ ಬಳಸುವಂತಿಲ್ಲ.

ಕಂಟೈನ್‌ಮೆಂಟ್ ವಲಯದ ವ್ಯಕ್ತಿಗಳು, 65 ವರ್ಷ ಮೇಲಿನ ಹಾಗೂ 10 ವರ್ಷದ ಒಳಗಿನವರು ಹಾಗೂ ಗರ್ಭಿಣಿಯರು ಪಾಲ್ಗೊಳ್ಳುವಂತಿಲ್ಲ. 37.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇರುವವರು ಭಾಗವಹಿಸುವಂತಿಲ್ಲ.

ಪ್ರವೇಶ ದ್ವಾರದಲ್ಲಿ ಹಾಗೂ ಸೂಕ್ತ ಸ್ಥಳಗಳಲ್ಲಿ ಸ್ಯಾನಿಟೈಸರ್‌ಗಳ ವ್ಯವಸ್ಥೆ ಮಾಡಬೇಕು. ಸಮಾರಂಭಕ್ಕೆ ಬರುವ ಪ್ರತಿಯೊಬ್ಬರನ್ನೂ ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಕೈ ಸ್ವಚ್ಛಗೊಳಿಸಲು ಹ್ಯಾಂಡ್‌ವಾಷ್‌, ಟಿಶ್ಯು ಪೇಪರ್‌ ಮತ್ತು ನೀರನ್ನು ವ್ಯವಸ್ಥೆ ಮಾಡಬೇಕು. ಮದ್ಯಪಾನ, ಪಾನ್‌ಮಸಾಲ, ಗುಟ್ಕಾ, ತಂಬಾಕು ಸೇವನೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ.

ಸಮಾರಂಭದ ಸ್ಥಳದಲ್ಲಿ ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ಹಾಗೂ ಸಹಕರಿಸುವ ಬಗ್ಗೆ ನಿಯೋಜಿತ ನೋಡಲ್‌ ಅಧಿಕಾರಿ ಮೇಲ್ವಿಚಾರಣೆ ಮಾಡಬೇಕು. ವಿವಾಹದಲ್ಲಿ ಪಾಲ್ಗೊಂಡವರ ಹೆಸರು, ಅವರ ಸಂಪರ್ಕ ಸಂಖ್ಯೆಯನ್ನು ದಾಖಲಿಸಬೇಕು. ಎಲ್ಲ ಅತಿಥಿಗಳು ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು