ಮಂಗಳೂರು: ಪೊಲೀಸ್ ನೇಮಕಾತಿ ಸ್ಪರ್ಧಾಕಾಂಕ್ಷಿಗಳಿಗಾಗಿ ನಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ 734 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, 115 ಪುರುಷರು, 91 ಮಹಿಳೆಯರು ಸೇರಿದಂತೆ 206 ಮಂದಿ ತರಬೇತಿ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

53 ಅಭ್ಯರ್ಥಿಗಳು ಪಿಯುಸಿ, 122 ಮಂದಿ ಪದವಿ ಶಿಕ್ಷಣ, 19 ಮಂದಿ ಸ್ನಾತಕೋತ್ತರ ಪದವೀಧರರು ಹಾಗೂ 8 ಅಭ್ಯರ್ಥಿಗಳು ಇತರ ಶಿಕ್ಷಣವನ್ನು ಪಡೆದವರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಿಂದ 162 ಅಭ್ಯರ್ಥಿಗಳು, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಒಟ್ಟು 42 ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ನಕ್ಸಲ್ ಪೀಡಿತ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇದಿಂದ ಆಗಸ್ಟ್ 21ರಿಂದ ಸೆಪ್ಟೆಂಬರ್ 17ರವರೆಗೆ ಪಿ.ಎಸ್.ಐ. ಹಾಗೂ ಕಾನ್‌ಸ್ಟೆಬಲ್ ಹುದ್ದೆಗಳ ಆಕಾಂಕ್ಷಿಗಳಿಗೆ ತರಬೇತಿ ಆಯೋಜಿಸಲಾಗಿತ್ತು.

ಒಟ್ಟು 23 ಮಂದಿ ತಜ್ಞರು ತರಬೇತಿ ನೀಡಿದ್ದಾರೆ. 14 ಮಂದಿ ಪಿಎಸ್‌ಐ, 6 ಮಂದಿ ಪ್ರೊ. ಪಿಎಸ್‌ಐ, ಇಬ್ಬರು ಸಿಪಿಸಿ ಹಾಗೂ ಡಾ. ಪ್ರಶಾಂತ್ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕೇಂದ್ರ ಉಪವಿಭಾಗದ ಎಸಿಪಿ ಪಿ.ಎ. ಹೆಗ್ಡೆ ಸಂಪೂರ್ಣ ಸಮನ್ವಯಕಾರರಾಗಿದ್ದರು. ಎಸಿಪಿ ಎಂ.ಎ. ಉಪಾಸ, ಪಿಐ ರಂಗೇಗೌಡ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭ

ಪೊಲೀಸ್ ಆಯ್ಕೆ ಆಕಾಂಕ್ಷಿ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಾಗಾರ ಸಮಾರೋಪ ಶುಕ್ರವಾರ ನಡೆಯಿತು

ಮುಖ್ಯ ಅಥಿತಿಗಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪಾಲ್ಗೊಂಡಿದ್ದರು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ, ನಗರ ಡಿಸಿಪಿ ಹರಿರಾಂ ಶಂಕರ್ ನಗರ, ಎಎನ್‌ಎಫ್ ಎಸ್‌ಪಿ ಬಿ. ನಿಖಿಲ್,ಕೆಎಸ್‌ಪಿಎಸ್ ಡಿಸಿಪಿ ಅಪರಾಧ ಸಂಚಾರ ಬಿ.ಪಿ. ದಿನೇಶ್ ಕುಮಾರ್, ಕಾಲೇಜಿನ ರೆಕ್ಟರ್ ರೆ.ಫಾ. ಮೆಲ್ಬನ್ ಜೋಸೆಫ್ ಪಿಂಟೋ, ಇಸ್ಕಾನ್ ಕಾರ್ಯದರ್ಶಿ ನಂದನದಾಸ್, ಕದ್ರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ,ಮಂಗಳಾದೇವಿ ದೇವಸ್ಥಾನ ಆಡಳಿತ ಮೋಕೇಸರ ಪಿ. ರಮಾನಾಥ ಹೆಗ್ಡೆ, ಮಾಜಿ ಮೇಯರ್ ಭಾಸ್ಕರ್ ಕೆ., ಶಾಂತಿ ಕಿರಣ್ ನಿರ್ದೇಶಕ ರೆ.ಫಾ. ಸಂತೋಷ ರೋಡ್ರಿಗಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.