ಪುತ್ತೂರು: ಶಾಂತಿ ಸೌಹಾರ್ದದ ಪ್ರತೀಕವಾಗಿರುವ ಮಹಾತ್ಮ ಗಾಂಧೀಜಿಯವರಂತೆ ಅಹಿಂಸಾ ತತ್ವವನ್ನು ಪಾಲನೆ ಮಾಡಲು ಧೈರ್ಯ ಬೇಕು. ಎಂತಹ ಸಂದರ್ಭದಲ್ಲೂ ಅವರು ಹಿಂಸೆಯತ್ತ ಮನಸ್ಸು ಮಾಡಲಿಲ್ಲ. ಆ ಕಾರಣಕ್ಕಾಗಿಯೇ ಅವರು ಮಹಾತ್ಮರಾದರು ಎಂದು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು.

ಪುತ್ತೂರಿನ ಗಾಂಧೀಕಟ್ಟೆಯಲ್ಲಿ ಗುರುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀಕಟ್ಟೆ ಸಮಿತಿ ವತಿಯಿಂದ ನಡೆದ ಗಾಂಧೀ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಂಧೀಜಿ ಕನಸಿನ ಭಾರತದ ಸೃಷ್ಟಿಗೆ ಅವರ ಜೀವನ ತತ್ವಗಳನ್ನು ಪಾಲಿಸಬೇಕು ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಮಗೆ ದೇಶವನ್ನೇ ಆಸ್ತಿಯನ್ನಾಗಿ ಕೊಟ್ಟಿದ್ದಾರೆ. ಗಾಂಧೀಜಿ ಬದುಕಿನ ತತ್ವಗಳು ಜನಸಾಮಾನ್ಯರ ಬದುಕಿಗೆ ಪ್ರೇರಣೆ ಎಂದು ಶಾಸಕ ಅಶೋಕ್ಕುಮಾರ್ ರೈ ಹೇಳಿದರು.

ಎಂಥ ಸವಾಲುಗಳ ನಡುವೆಯೂ ಮಹಾತ್ಮಾಗಾಂಧಿ ಅಹಿಂಸಾ ತತ್ವ ಬಿಟ್ಟುಕೊಡಲಿಲ್ಲ ಎಂದ ಅವರು ಅಮೇರಿಕ ಆರ್ಥಿವಾಗಿ ಸುಭದ್ರವಾಗಿದೆ. ನಾವು ಹಿಂದೆ ಇದ್ದೇವೆ ಎಂಬುವುದು ಹಲವರ ಅಭಿಪ್ರಾಯ. ಆದರೆ ಅಮೆರಿಕ ಸ್ವಾತಂತ್ರ್ಯ ಪಡೆದು 240 ವರ್ಷಗಳಾಗಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು 79 ವರ್ಷಗಳ ಹಿಂದೆ. ಹಾಗಿದ್ದರೂ ನಮ್ಮ ಆರ್ಥಿಕತೆಯ ಹಾಗೂ ಅಭಿವೃದ್ಧಿಯ ವೇಗ ಸುಸ್ಥಿತಿಯಲ್ಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹ ಇಲ್ಲ ಎಂದು ಅವರು ಹೇಳಿದರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ನಾಗರಾಜ್ ವಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಜಯಪ್ರಕಾಶ್, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಹಿರಿಯ ಗಾಂಧಿವಾದಿ ಬೋಳೋಡಿ ಚಂದ್ರಹಾಸ ರೈ, ಗಾಂಧಿಕಟ್ಟೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೈಯದ್ ಕಮಲ್ ಪಾಲ್ಗೊಂಡಿದ್ದರು.

ಗಾಂಧೀಕಟ್ಟೆ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ವಂದಿಸಿದರು.ಇಸಾಕ್ ಸಾಲ್ಮರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.