ಸಮುದ್ರದಲ್ಲಿ ನೀಲಿವರ್ಣ; ಪ್ಲಾಂಕ್ಟನ್, ಬ್ಯಾಕ್ಟಿರೀಯಾ ಕಾರಣ

ಮಂಗಳೂರು: ಸಮುದ್ರದಲ್ಲಿನೀಲಿ, ಹಸಿರು ಬಣ್ಣದ ತೆರೆಗಳು ಕಾಣಿಸುತ್ತಿದ್ದು, ಅಚ್ಚರಿ ಮೂಡಿಸಿದೆ.
ಸೋಮೇಶ್ವರ, ಉಚ್ಚಿಲ, ಸಿಸಿಹಿತ್ಲು ಬೀಚ್ ಗಳಲ್ಲಿ ಈ ವಿದ್ಯಮಾನ ಕಾಣಿಸಿಕೊಂಡಿದೆ. ಹಲವಾರು ಜನರು ಇದನ್ನು ನೋಡಲು ಸಮುದ್ರದ ತೀರಗಳಿಗೆ ತೆರಳುತ್ತಿದ್ದಾರೆ.
ಈ ಕುರಿತು ಅಧ್ಯಯನ ನಡೆಸಿರುವ ಇಲ್ಲಿನ ಮೀನುಗಾರಿಕೆ ಕಾಲೇಜಿನ ವಿಜ್ಞಾನಿಗಳು, ಇದು ಪ್ಲಾಂಕ್ಟನ್ ಹಾಗೂ ಬ್ಯಾಕ್ಟಿರಿಯಾಗಳಿಂದ ಆಗುತ್ತಿದೆ ಎಂದು ತಿಳಿಸಿದ್ದಾರೆ.
ನೀರಿನ ಮಾದರಿಯನ್ನು ಸಂಗ್ರಹಿಸಿ, ಮೈಕ್ರೋಸ್ಕೋಪ್ ಮೂಲಕ ಪರೀಕ್ಷಿಸಲಾಗಿದೆ. ಪ್ಲಾಂಕ್ಟನ್ ಮತ್ತು ಬ್ಯಾಕ್ಟಿರೀಯಾಗಳು ಗೋಚರಿಸಿವೆ ಎಂದು ಕಾಲೇಜಿನ ಡೀನ್ ಡಾ.ಎ. ಸೆಂಥಿಲ್ ವೇಲ್ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.