ಮಂಗಳೂರು: ಮಳೆಗಾಲದ, ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇರುವ ದಿನಗಳಲ್ಲಿ ರಜೆ ಘೋಷಣೆಗಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾಯುತ್ತಿರುತ್ತಾರೆ. ಅವರೊಂದಿಗೆ, ಸಾರ್ವಜನಿಕರು ವಿಶೇಷವಾಗಿ ವಾಹನ ಸವಾರರು ಕೂಡ ಕಾಯುತ್ತಿರುತ್ತಾರೆ. ಇದಕ್ಕೆ ಕಾರಣ, ಶಾಲೆಗಳ ಬಳಿ ನಿತ್ಯವೂ ಆಗುವ ಸಂಚಾರ ದಟ್ಟಣೆ.

ಹೊಂಡಗಳಿಂದ ತುಂಬಿದ ಮಂಗಳೂರು ನಗರದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಅತ್ಯಂತ ದುಷ್ಕರ. ಶಾಲೆಗಳು ಆರಂಭವಾಗುವ ಮತ್ತು ಬಿಡುವ ಸಮಯದಲ್ಲಂತೂ ಇನ್ನೂ ಕಷ್ಟ. ಈ ಸಂದರ್ಭದಲ್ಲಿ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟುವುದು, ಮಕ್ಕಳು ಅಡ್ಡಾದಿಡ್ಡಿ ಓಡುವುದು, ಮಕ್ಕಳನ್ನು ಬಿಡಲು ಬರುವ ಪಾಲಕರು ಧಾವಂತದಿಂದ ದಿಢೀರ್ ಆಗಿ ವಾಹನಗಳನ್ನು ಮುಂದಕ್ಕೆ ಚಲಾಯಿಸುವುದು ಇತ್ಯಾದಿಗಳಿಂದಾಗಿ ಅಪಾಯ ಕಾದಿರುತ್ತದೆ. ಹೀಗಾಗಿ ಶಾಲಾ ವಠಾರ ‘ಫ್ರೀ ಝೋನ್’ ಆಗಿರಲಿ ಎಂದು ಎಲ್ಲರೂ ಬಯಸುತ್ತಾರೆ.

ಶಾಲಾ ಮಕ್ಕಳ ಸುರಕ್ಷತೆಗಾಗಿ ಅನೇಕ ‘ನೀತಿ’ಗಳು ಜಾರಿಯಲ್ಲಿದ್ದರೂ ಅದ್ಯಾವುದೂ ಕಾರ್ಯಗತ ಆಗುತ್ತಿಲ್ಲ ಎಂದು ಶಾಲೆಗಳ ಬಳಿ ಓಡಾಡಿದರೆ ಗಮನಕ್ಕೆ ಬರುತ್ತದೆ. ‘ಈಗ ಎಲ್ಲವೂ ಸರಿಯಾಗಿದೆ, ಯಾರಿಂದಲೂ ದೂರು ಬಂದಿಲ್ಲ, ಈ ಸಮಸ್ಯೆಗೆ ನಾವೇನು ಮಾಡಲಾಗುತ್ತದೆ, ಅದು ಆ ಇಲಾಖೆಯವರು ನೋಡಿಕೊಳ್ಳಬೇಕಾದ ವಿಷಯ’ ಎಂಬಿತ್ಯಾದಿ ಸಿದ್ಧ ಉತ್ತರಗಳು ಅಧಿಕಾರಿಗಳಿಂದ ಬರುತ್ತವೆ. ಆದರೆ ಮಕ್ಕಳ ಜೀವಕ್ಕೆ ಅಪಾಯ ಆಗಬಲ್ಲ, ಸಾರ್ವಜನಿಕರಿಗೆ ತೊಂದರೆಯಾಗುವ ಈ ಸಮಸ್ಯೆಗೆ ಪರಿಹಾರ ಕಾಣಲು ಇದುವರೆಗೆ ಯಾರಿಗೂ ಸಾಧ್ಯವಾಗಲಿಲ್ಲ. ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿ ಎಲ್ಲ ಶಾಲೆಗಳಲ್ಲಿ ಇರಬೇಕು. ಆದರೆ ಎಷ್ಟು ಶಾಲೆಗಳಲ್ಲಿ ಇದೆ ಎಂಬದುಕ್ಕೂ ಸಮರ್ಪಕವಾದ ಉತ್ತರ ಇಲ್ಲ.

ಮಕ್ಕಳ ರಕ್ಷಣೆಗಾಗಿ ಅದರಲ್ಲೂ ಶಾಲಾ ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತರಬೇಕಾದ ಕ್ರಮಗಳ ಬಗ್ಗೆ ರಾಜ್ಯದ ಸಾರಿಗೆ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2013ರಲ್ಲೇ ಅಧಿಸೂಚನೆ ಹೊರಡಿಸಿತ್ತು. ಇದು 2019ರಲ್ಲಿ ಪರಿಷ್ಕರಣೆ ಆಗಿದೆ. 2016ರಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯ ಜಾರಿಗೆ ಬಂದಿದೆ. 1989ರ ಕರ್ನಾಟಕ ಮೋಟಾರು ವಾಹನಗಳ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ವಾಹನಗಳ ‘ಫಿಟ್ನೆಸ್’ ಬಗ್ಗೆ ಉಲ್ಲೇಖವಿರುವ ಆದೇಶವನ್ನು 2012ರಲ್ಲಿ ಹೊರಡಿಸಲಾಗಿದೆ. 2019ರಲ್ಲಿ ತಿದ್ದುಪಡಿ ಮಾಡಿ ‘ಸ್ಕೂಲ್ ಕ್ಯಾಬ್ಸ್ ಸೇಫ್ಟಿ ಕಮಿಟಿ’ ಕುರಿತ ಮಾಹಿತಿ ಸೇರಿಸಲಾಗಿತ್ತು. ಶಾಲೆಯ ಆವರಣದಲ್ಲೇ ವಾಹನ ನಿಲುಗಡೆಗೆ ಸೌಲಭ್ಯ ಇರಬೇಕೆಂದೂ ವೇಗ ನಿಯಂತ್ರಣಕ್ಕೆ ಗುಣಮಟ್ಟದ ‘ಸ್ಪೀಡ್ ಗವರ್ನರ್’ ಅಳವಡಿಸಬೇಕೆಂದೂ ನಿರ್ದಿಷ್ಟ ಬಣ್ಣ ಬಳಸಿ ಶಾಲಾ ವಾಹನ ಎಂಬುದನ್ನು ಗುರುತಿಸುವಂತೆ ಮಾಡಬೇಕೆಂದೂ ಷರತ್ತುಗಳನ್ನು ವಿಧಿಸಲಾಗಿತ್ತು.

ಇಷ್ಟೆಲ್ಲ ಇದ್ದರೂ ಮಕ್ಕಳಿಗಾಗಿ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಸ್ಪಷ್ಟತೆಯೇ ಇಲ್ಲ ಎಂಬುದು ಕೆಲವು ಪಾಲಕರಿಗೂ ಅಚ್ಚರಿ ತಂದಿದೆ. ಶಾಲೆಗಳ ಅಧಿಕೃತ ವಾಹನಗಳಿಗಿಂತ ಹೆಚ್ಚು ವಾಹನಗಳನ್ನು ಪೋಷಕರೇ ಖಾಸಗಿಯಾಗಿ ಏರ್ಪಾಡು ಮಾಡಿರುವುದು ಮತ್ತು ಸ್ವತ: ತಾವೇ ಶಾಲೆಗೆ ಕರೆದುಕೊಂಡು ಬರುವುದು ಮತ್ತು ವಾಪಸ್ ಕರೆದುಕೊಂಡು ಹೋಗುವುದು ಶಾಲಾ ವಠಾರದಲ್ಲಿ ವಾಹನಗಳ ದಟ್ಟಣೆಗೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ.

ಅಧಿಕ ತೆರಿಗೆ ಪಾವತಿ

ಶಾಲಾ ವಾಹನ ಎಂದು ಗುರುತಿಸಬೇಕಾದರೆ ನಿರ್ದಿಷ್ಟ ಮಾನದಂಡಗಳನ್ನು ಪಾಲಿಸಬೇಕು. ಅಂಥ ವಾಹನಗಳಿಗೆ ತೆರಿಗೆ ರಿಯಾಯಿತಿ ಇದೆ. ಆದರೆ ಅವುಗಳನ್ನು ಬೇರೆಲ್ಲೂ ಬಳಸಲು ಆಗುವುದಿಲ್ಲ. ಆದ್ದರಿಂದ ತೆರಿಗೆ ಹೆಚ್ಚು ಪಾವತಿಸಿದರೂ ಪರವಾಗಿಲ್ಲ, ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ಮತ್ತು ಮಕ್ಕಳನ್ನು ಶಾಲೆಗೆ ಅಥವಾ ವಾಪಸ್ ಮನೆಗೆ ಬಿಟ್ಟ ನಂತರ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂಬ ಉದ್ದೇಶದಿಂದ ಬಹುತೇಕರು ‘ಶಾಲಾ ವಾಹನ’ವನ್ನಾಗಿ ಪರಿವರ್ತಿಸಲು ಮುಂದಾಗುತ್ತಿಲ್ಲ.

‘ಸ್ಕೂಲ್ ಕ್ಯಾಬ್ ಕಮಿಟಿ’ಗಳು ಇದ್ದರೂ ಇಂಥ ವಾಹನಗಳ ಮೇಲೆ ನಿಯಂತ್ರಣ ಹೇರಲು ಆಗುವುದಿಲ್ಲ. ಇದು ಕೂಡ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಮಲ್ಲಾಡ್ ಹೇಳಿದರು.

‘ಶಾಲಾ ವಾಹನಗಳ ಬಗ್ಗೆ ಗಂಭೀರವಾಗಿರಬೇಕು ಎಂದು ಶಾಲೆಗಳಿಗೆ ತಿಳಿಸಲಾಗುತ್ತಿದೆ. ಇಲಾಖೆಯ ಸಿಬ್ಬಂದಿ ಪ್ರತಿ ಶಾಲೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೂನ್ ಆರಂಭದಲ್ಲೇ ಎಲ್ಲ ಶಾಲೆಗಳಿಗೆ ಇ ಮೇಲ್ ಕಳುಹಿಸಲಾಗಿದೆ. 20ರಷ್ಟು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಎಲ್ಲ ಕ್ರಮಗಳಿಂದಾಗಿ ಈಚೆಗೆ ಕೆಲವು ಶಾಲೆಗಳ ಆಡಳಿತ ಹೊಸ ವಾಹನಗಳನ್ನು ಖರೀದಿ ಮಾಡಿವೆ’ ಎಂದು ಅವರು ವಿವರಿಸಿದರು.

‘ನಗರದಲ್ಲಿ ಶಾಲೆಗಳ ಬಳಿ ವಾಹನ ದಟ್ಟಣೆ ಸಮಸ್ಯೆ ಮೊದಲಿನಷ್ಟು ಇಲ್ಲ. ಸಾಧ್ಯವಾದಲ್ಲೆಲ್ಲ ಸಿಬ್ಬಂದಿಯನ್ನು ನಿಯೋಜಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಶಾಲೆಗಳ ಬಳಿಗೆ ಪಾಲಕರು ವಾಹನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಲ್ಲಿಸಬೇಕು. ಕೆಲಸಕ್ಕೆ ಹೋಗುವಾಗ ಅಥವಾ ಕೆಲಸ ಬಿಟ್ಟು ಬರುವಾಗ ಮಕ್ಕಳನ್ನು ಬಿಡುವುದು ಮತ್ತು ಕರೆದುಕೊಂಡು ಹೋಗುವುದನ್ನು ಕೆಲವು ಪಾಲಕರು ರೂಢಿಸಿಕೊಂಡಿದ್ದಾರೆ. ಇದನ್ನು ನಿಲ್ಲಿಸಿದರೆ ಸಮಸ್ಯೆಗೆ ಒಂದಷ್ಟು ಪರಿಹಾರ ಸಿಗಬಹುದು. ಆದರೆ ಎಲ್ಲರಿಗೂ ಧಾವಂತ, ಕೆಲಸಕ್ಕೆ ಹೋಗುವ ಅಥವಾ ಮನೆ ಸೇರುವ ತರಾತುರಿಯಲ್ಲಿ ಅವರು ಇತರರಿಗಾಗುವ ಸಮಸ್ಯೆಯನ್ನು ಗಮನಿಸುವುದಿಲ್ಲ’ ಎಂಬುದು ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಖಿ ಹೇಳಿದರು.

‘ಶಾಲೆಗೆ ಮಾನ್ಯತೆ ಕೊಡುವ ಸಂದರ್ಭದಲ್ಲಿ ವಾಹನಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ. ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿಗಳ ಮೇಲೆಯೂ ನಿಗಾ ಇರಿಸಲಾಗುತ್ತದೆ. ಆದರೆ ಹೊರಗಿನ ವಾಹನಗಳು ಶಾಲೆಯ ವಠಾರದಲ್ಲಿ ನಿಲ್ಲುವುದೇ ದೊಡ್ಡ ಸಮಸ್ಯೆ. ಒಳಗೆ ಬಿಟ್ಟರೆ ಮಕ್ಕಳಿಗೆ ಅಪಾಯ ಆಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಆಡಳಿತ ಮಂಡಳಿಯವರು ಹೊರಗಿನ ವಾಹನಗಳನ್ನು ಗೇಟಿನ್ ಹೊರಗೆಯೇ ನಿಲ್ಲಿಸಲು ಸೂಚಿಸುತ್ತಾರೆ. ಪೊಲೀಸ್ ಮತ್ತು ಸಾರಿಗೆ ಇಲಾಖೆಯವರು ಗಮನಿಸಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು’ ಎಂದು ಡಿಡಿಪಿಐ ಗೋವಿಂದ ಮಡಿವಾಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.