ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಲ್ಲಿ ಯುವತಿಯ ಸೊಂಟಕ್ಕೆ ಕೈ ಹಾಕಿದ ಯುವಕ

ಯುವಕನ ಪೊಲೀಸರ ವಶಕ್ಕೆ ಒಪ್ಪಿಸಿದ ಸಾರ್ವಜನಿಕರು
Published 9 ಜೂನ್ 2024, 6:27 IST
Last Updated 9 ಜೂನ್ 2024, 6:27 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ನಿಂದ ಬಜಪೆಗೆ ಹೋಗುವ ಮರೋಳಿ ಬಸ್‌ನಲ್ಲಿ ಶುಕ್ರವಾರ ಪ್ರಯಾಣಿಸುತ್ತಿದ್ದ ವೇಳೆ, ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ವ್ಯಕ್ತಿಯು ಸೊಂಟಕ್ಕೆ ಕೈ ಹಾಕಿದ್ದಾನೆ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ. ಸಾರ್ವಜನಿಕರು ಆರೋಪಿಯನ್ನು ಹಿಡಿದು, ಬಟ್ಟೆ ಬಿಚ್ಚಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬಜಪೆ, ಕಳವಾರ ಚರ್ಚ್ ಬಳಿಯ ಖುರ್ಸು ಗುಡ್ಡ ನಿವಾಸಿ ಕಲಂದರ್ ಶಾಫಿ (31 ವರ್ಷ)  ಬಂಧಿತ ಆರೋಪಿ. 

‘ಯುವತಿಯು ನಗರದ ಕಂಪನಿಯೊಂದರ ಉತ್ಪನ್ನಗಳ ಮಾರಾಟ ಮಾಡುವ ಕೆಲಸದಲ್ಲಿದ್ದಾರೆ. ಅವರು ಈ ಕೆಲಸದ ಸಲುವಾಗಿ ಶುಕ್ರವಾರ ನಗರಕ್ಕೆ ಬಂದಿದ್ದರು. ಸ್ಟೇಟ್‌ಬ್ಯಾಂಕ್‌ನಿಂದ ಬಜಪೆಗೆ ಮರಳಲು ಮರೋಳಿ ಬಸ್‌ನ ನಾಲ್ಕನೇ ಸೀಟಿನಲ್ಲಿ ಕುಳಿತಿದ್ದರು. ಅವರನ್ನು ಹಿಂಬಾಲಿಸಿ ಬಂದಿದ್ದ ಆರೋಪಿ ಅವರ ಹಿಂಬದಿಯ ಸೀಟಿನಲ್ಲಿ  ಕುಳಿತಿದ್ದ. ಬಸ್‌ನಲ್ಲೇ ಯುವತಿಯ ಸೊಂಟಕ್ಕೆ ಕೈ ಹಾಕಿದ್ದ. ನಗರದ ಅಂಬೇಡ್ಕರ್‌ ವೃತ್ತ–  ಬಲ್ಲಾಳ್‌ಬಾಗ್‌ ನಡುವೆ ಸಾರ್ವಜನಿಕರು ಆತನನ್ನು ಹಿಡಿದು ಅಂಗಿ ಬಿಚ್ಚಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಸಾರ್ವಜನಿಕರು ತನಗೆ ಹಲ್ಲೆ ನಡೆಸಿಲ್ಲ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ’  ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಈ ಘಟನೆ ಬಗ್ಗೆ ಯುವತಿ ದೂರು ನೀಡಿದ್ದು, ನಗರ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT