ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್ ಟಿವಿ ಕೊಡುಗೆ

Published 6 ಆಗಸ್ಟ್ 2023, 14:09 IST
Last Updated 6 ಆಗಸ್ಟ್ 2023, 14:09 IST
ಅಕ್ಷರ ಗಾತ್ರ

ಮಂಗಳೂರು: ನಗರದ ಚಿಲಿಂಬಿಯ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬ್ಯಾಂಕ್ ಆಫ್ ಬರೋಡದ ಅಶೋಕನಗರ ಶಾಖೆಯ ವತಿಯಿಂದ ಸ್ಮಾರ್ಟ್ ಗೂಗಲ್ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.

ಕೊಡುಗೆ ನೀಡಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್, ‘ವ್ಯವಹಾರದ ಜೊತೆಗೆ ಸದಾ ಸಮಾಜಮುಖಿ ಸೇವೆಗಳಲ್ಲೂ ಬ್ಯಾಂಕ್‌ ತೊಡಗಿಕೊಂಡಿರುತ್ತದೆ’ ಎಂದರು.

ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ, ನ್ಯಾಯಧೀಶೆ ಶೋಭಾ ಬಿ.ಜಿ. ಮುಖ್ಯ ಅತಿಥಿಯಾಗಿದ್ದರು.‌ ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ರಾಜೇಂದ್ರ ಚಿಲಿಂಬಿ, ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಉಪಾಧ್ಯಕ್ಷೆ ಅಪರ್ಣ, ಬ್ಯಾಂಕ್ ಆಫ್‌ ಬರೋಡ ಸಹಾಯಕ ವ್ಯವಸ್ಥಾಪಕ ಪ್ರಮೋದ್, ಅಂಗನವಾಡಿ ಸಹಾಯಕಿ ಮಲ್ಲಿಕ ಮುಂತಾದವರು ಇದ್ದರು. ಅಂಗನವಾಡಿ ಕಾರ್ಯಕರ್ತೆ ಅಜಿತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT