ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ದೇವಸ್ಥಾನಗಳು ಇತ್ತೀಚಿನ ವರ್ಷಗಳಲ್ಲಿ ವಿಪರೀತ ಎಂಬಂತೆ ಜೀರ್ಣೋದ್ಧಾರ ಆಗುತ್ತಿದ್ದು ಇದರಿಂದ ಪರಂಪರೆಯಿಂದ ಬಂದ ಧಾರ್ಮಿಕ ಪದ್ಧತಿಗಳು ಮಾಯ ಆಗುತ್ತಿವೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ಅಭಿಪ್ರಾಯಪಟ್ಟರು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.

'ಕೇರಳದ ಜೋತಿಷಿಗಳಿಂದ ದಕ್ಷಿಣ ಕನ್ನಡ ಭಾಗದಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಪ್ರಶ್ನೆ ಇರಿಸುತ್ತಾರೆ. ಅವರು ಇಲ್ಲಿಯ ಧಾರ್ಮಿಕ ಪದ್ಧತಿಯಂತೆ ಸಲಹೆ ನೀಡುವುದಿಲ್ಲ. ಹೀಗಾಗಿ ಪದ್ಧತಿಯೊಂದು ನಾಶವಾಗುತ್ತಿದೆ. ಇದು ನಿಜವಾದ ಮತಾಂತರ‘ ಎಂದರು.

ವಿಗ್ರಹಾರಾಧನೆ ಇಲ್ಲದಿದ್ದ ಕಾರಣ ಹಿಂದೂ ಸಂಸ್ಕೃತಿಯಲ್ಲಿ 1500 ವರ್ಷಗಳ ಹಿಂದೆ ದೇವಸ್ಥಾನಗಳ ಕಲ್ಪನೆಯೇ ಇರಲಿಲ್ಲ. ಈಗಿನ ದೇವಸ್ಥಾನಗಳ ಸಂಸ್ಕೃತಿ ಬೌದ್ಧರ ಕೊಡುಗೆ. ಜಿಲ್ಲೆಯ ಮೂಲೆಮೂಲೆಗಳಲ್ಲಿ ಈಚೆಗೆ ದೇವಸ್ಥಾನಗಳ ಜೀರ್ಣೋದ್ಧಾರ ಆಗುತ್ತಿದೆ. ಸಣ್ಣ ಗುಡಿಗಳು ಬೃಹತ್ ದೇವಸ್ಥಾನಗಳಾಗಿ ಅಭಿವೃದ್ಧಿ ಆಗುತ್ತಿವೆ. ಇದು ಸರಿಯಲ್ಲ. ಸಣ್ಣ ದೇವಸ್ಥಾನಗಳನ್ನು ಆಯಾ ಪ್ರದೇಶಕ್ಕೆ ತಕ್ಕಂತೆ ನಿರ್ಮಿಸಿರುತ್ತಾರೆ. ಅವುಗಳನ್ನು ಅನಗತ್ಯವಾಗಿ ಹಿಗ್ಗಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸಿನಿಮಾ ಮತ್ತು ಧಾರಾವಾಹಿಗಳ ಪ್ರಭಾವದಿಂದ ದೇವರ ಕಲ್ಪನೆಯೇ ಈಚೆಗೆ ಬದಲಾಗಿದೆ. ವಾಸ್ತವದಲ್ಲಿ ದೇವರು ವ್ಯಕ್ತಿಯಲ್ಲ. ಅದೊಂದು ತತ್ವ ಮಾತ್ರ. ತತ್ವಗಳು ಇರುವಲ್ಲಿ ಮಾತ್ರ ದೇವಸ್ಥಾನಗಳು ಇರಬೇಕು. ಈ ಕಾರಣದಿಂದ ಹಿಂದಿನವರು ಸಂತೆಯ ನಡುವೆ ದೇವಸ್ಥಾನ ನಿರ್ಮಿಸುತ್ತಿರಲಿಲ್ಲ. ಭಾರತದಲ್ಲಿ ಈಚೆಗೆ ರಾಜಕೀಯ ಸಿದ್ಧಾಂತವೊಂದರ ಭಾಗವಾಗಿ ಧರ್ಮವನ್ನು ನೋಡಲಾಗುತ್ತಿದೆ. ಧರ್ಮವು ಸಿದ್ಧಾಂತ ಮತ್ತು ಸಂಘಟನೆಯ ಚೌಕಟ್ಟಿಗೆ ಒಳಗಾಗಬಾರದು. ಧಾರ್ಮಿಕ ಉತ್ಸವಗಳಲ್ಲಿ ರಾಜಕೀಯ ಸಿದ್ಧಾಂತ ನುಸುಳಬಾರದು ಎಂದ ಅವರು ಅನುಸೂಚಿತ ಜಾತಿಗಳ ಆರಾಧನಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಪಹಣಿ ಮಾಡಿಕೊಡಲು ಪ್ರಯತ್ನಿಸಬೇಕು, ಇಲ್ಲವಾದರೆ ಸಾಂಸ್ಕೃತಿಕ ಪಲ್ಲಟ ಆಗಬಹುದು ಎಂದರು.

ಬೆಳ್ತಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ರಾಘವ ನಾಳ ಮಾತನಾಡಿ ದಕ್ಷಿಣ ಕನ್ನಡ ಭಾಗದ ದೇವಸ್ಥಾನಗಳು ಆಗಮ ಶಾಸ್ತ್ರವನ್ನು ಹಿಂಬಾಲಿಸುತ್ತಿವೆ. ಆ ಸಂಪ್ರದಾಯವನ್ನು ಮೀರುವಂತೆ ವರ್ತಿಸಬಾರದು ಎಂದರು.

‘ಆಕರ್ಷಣೆಗಾಗಿ ಮೂಲ ಸಂಪ್ರದಾಯವನ್ನು ಮೀರಬಾರದು, ದೇವಸ್ಥಾನಗಳ ಆದಾಯ ದುರುಪಯೋಗ ಆಗದಂತೆ ಮತ್ತು ರಾಜಕೀಯ ಹಿತಾಸಕ್ತಿಗಳು ನುಸುಳದಂತೆ ನೋಡಿಕೊಳ್ಳುವ ಜವಾಬ್ದಾರಿ ವ್ಯವಸ್ಥಾಪನಾ ಸಮಿತಿಗಳದು’ ಎಂದು ಜಿಲ್ಲಾ ಉಸ್ತುವಾರಿ ಸಚಿಚ ದಿನೇಶ್ ಗುಂಡುರಾವ್ ಹೇಳಿದರು.

ಶಾಸಕರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮುಖಂಡರಾದ ರಮಾನಾಥ ರೈ, ಹರೀಶ್ ಕುಮಾರ್, ರಾಜ್ಯ ಧಾರ್ಮಿಕ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಭಾರಿ, ಹೆಚ್ಚುವರಿ ಎಸ್ಪಿ ರಾಜೇಂದ್ರ ಡಿ.ಎಸ್ ಪಾಲ್ಗೊಂಡಿದ್ದರು.

ಜಾಗ ಸ್ವಾಧೀನ ಮಾಡಿದ್ದಕ್ಕೆ ಎಫ್ಐಆರ್!

ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು ₹ ಕೋಟಿ ಮೊತ್ತದ ಜಾಗವನ್ನು ಸ್ವಪ್ರಯತ್ನದಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಈ ಕಾರ್ಯಕ್ಕೆ ಸಿಕ್ಕಿದ್ದು ಎಫ್ಐಆರ್ ಶಿಕ್ಷೆ ಎಂದು ನೊಂದು ಹೇಳಿದ್ದು ಪುತ್ತೂರು ಮಹಾಲಿಂಗೇಶ್ವದ ದೇವಸ್ಥಾನದ ಪರವಾಗಿ ಬಂದಿದ್ದ ಪ್ರತಿನಿಧಿ. ಸಮಿತಿಯಲ್ಲಿ ನಮ್ಮ ಸ್ಥಾನ ಮೂರು ವರ್ಷಗಳಲ್ಲಿ ಮುಗಿಯಬಹುದು. ಆದರೆ ಎಫ್ಐಆರ್ ಹಾಗೆಯೇ ಇರುತ್ತದೆ. ಇದಕ್ಕೊಂದು ಪರಿಹಾರ ಬೇಕು ಎಂದು ಅವರು ಕೋರಿಕೊಂಡರು. ‘ದೇವಸ್ಥಾನಕ್ಕೆ ಅಧಿಕೃತವಾಗಿ 38 ಎಕರೆ ಜಮೀನು ಇದೆ. ಆದರೆ ಈಗ ಸ್ವಾಧೀನದಲ್ಲಿರುವುದು 14 ಎಕರೆ ಮಾತ್ರ. ಲಕ್ಷಗಟ್ಟಲೆ ಹಣವನ್ನು ಕೈಯಿಂದ ಹಾಕಿ ಶಾಸಕ ಅಶೋಕ್ ರೈ ಅವರ ನೆರವಿನಿಂದ ಭೂಮಿಯನ್ನು ವಾಪಸ್ ಪಡೆಯುತ್ತಿದ್ದೇವೆ. ಅಲ್ಲಿ ವಾಸವಿರುವವರಿಗೆ ಪರಿಹಾರ ನೀಡುತ್ತಿದ್ದೇವೆ’ ಎಂದು ಅವರು ವಿವರಿಸಿದರು. ಸದ್ಯ ಅಸ್ತಿತ್ವದಲ್ಲಿಲ್ಲದ ಮಹಾಗಣಪತಿ ಟ್ರಸ್ಟ್ ಬಳಿ ಇರುವ ಸೌತಡ್ಕ ಗಣಪತಿ ದೇವಸ್ಥಾನದ ಮೂರು ಎಕರೆ ಭೂಮಿಯನ್ನು ಸ್ವಾಧೀನ ಪಡೆಯಲು ಅವಕಾಶ ನೀಡಬೇಕು ಎಂದು ಸುಬ್ರಹ್ಮಣ್ಯ ಶಿಬರಾಯ ಕೋರಿದರು.‘ಸಿ’ ದರ್ಜೆಯ ದೇವಸ್ಥಾನಗಳ ಪಟ್ಟಿಯಲ್ಲಿರುವ ಬೆಳ್ತಂಗಡಿ ಸೋಮನಾಥ ದೇವಸ್ಥಾನಕ್ಕೆ ತಸ್ದೀಕ್ ಬರುತ್ತಿಲ್ಲ ಎಂದು ಬಾಲಕೃಷ್ಣ ಗೌಡ ತಿಳಿಸಿದರು. ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಲು ನಿಗದಿ ಮಾಡಿರುವ ಸಮಯದ ಅವಧಿಯನ್ನು ಹೆಚ್ಚು ಮಾಡಬೇಕು ಎಂದು ಕದ್ರಿ ದೇವಸ್ಥಾನ ಸಮಿತಿ ಸದಸ್ಯ ದಿಲ್ರಾಜ್ ಆಳ್ವ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.