ಮೂಡುಬಿದಿರೆ: ಪದವಿ ಪೂರೈಸುವುದು ಅಥವಾ ವಿಷಯವನ್ನು ಕಂಠಪಾಠ ಮಾಡಿ ರ್ಯಾಂಕ್, ಪದಕ ಪಡೆಯುವುದು ಶಿಕ್ಷಣ ಅಲ್ಲ. ಬದುಕಿನಲ್ಲಿ ಎದುರಾಗುವ ಸವಾಲು ಹಾಗೂ ಸಮಸ್ಯೆಗಳನ್ನು ಮೆಟ್ಟಿ ನಿಂತು ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಜೀರ್ ಹೇಳಿದರು.

ಬನ್ನಡ್ಕದಲ್ಲಿರುವ ಮಂಗಳೂರು ವಿವಿಯ ಘಟಕ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರೇರಣಾ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಸಾಮಾಜಿಕ ಜವಬ್ದಾರಿ ಮೂಡಿಸಬೇಕು. ಈ ಮೂಲಕ ನಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು. ವಿದ್ಯಾರ್ಥಿಗಳು ಭವಿಷ್ಯದ ನೌಕರರಾಗಬಾರದು. ರಾಷ್ಟ್ರನಿರ್ಮಾಣದಲ್ಲಿ ಪಾಲುದಾರರಾಗಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕರಲ್ಲೂ ಇಂಥ ಮನೋಭಾವ ಇರಬೇಕು. ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕುವ ಮೊದಲು ಅದನ್ನು ನಮ್ಮ ಮನಸ್ಸಿನಲ್ಲಿ ಕೇಂದ್ರೀಕರಿಸಿಕೊಳ್ಳಬೇಕು. ವಿದ್ಯೆಯ ಜತೆಗೆ ಒಳ್ಳೆಯ ಬುದ್ಧಿ, ಸಂಸ್ಕಾರವನ್ನು ಮಕ್ಕಳಿಗೆ ಕಳಿಸಿ. ಹೆತ್ತವರಲ್ಲೂ ಸಂಸ್ಕಾರ ಇರಬೇಕು ಎಂದರು.

ನಿಧಾನವಾಗಿಯಾದರೂ ಬನ್ನಡ್ಕ ಕಾಲೇಜು ಉತ್ತಮ ಶಿಕ್ಷಣ ಸಂಸ್ಥೆಯಾಗಿ ಅಭಿವೃದ್ಧಿಯಾಗುತ್ತಿದೆ. ಈ ಕಾಲೇಜಿನಲ್ಲಿ ಓದಿದ ನಾನು ಬದುಕಿನಲ್ಲಿ ಇಷ್ಟು ಎತ್ತರಕ್ಕೆ ಏರಿದೆ ಎಂದು ಭವಿಷ್ಯದಲ್ಲಿ ಹೆಮ್ಮೆಯಿಂದ ಹೇಳುವ ವ್ಯಕ್ತಿಗಳು ಸಿಗುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ 2021ರಲ್ಲಿ ಪ್ರಾರಂಭವಾದ ಬನ್ನಡ್ಕ ಘಟಕ ಕಾಲೇಜು ಮಂಗಳೂರು ವಿವಿಯ ಕಠಿಣ ನಿಯಮಗಳಿಂದಾಗಿ ಸಂಕಷ್ಟದಲ್ಲಿದೆ. ಕೆಲವು ವಿಭಾಗಗಳನ್ನು ರದ್ದುಪಡಿಲಾಗಿದೆ. ಕಾಲೇಜನ್ನು ಮುಚ್ಚಲಾಗುತ್ತದೆ ಎಂಬ ಅಪಪ್ರಚಾರವೂ ಕೇಳಿಬರುತ್ತಿದೆ. ನನ್ನ ಕನಸಿನ ಯೋಜನೆಯ ಈ ಕಾಲೇಜು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಅವರು ಆಗ್ರಹಿಸಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ಬನ್ನಡ್ಕದ ಘಟಕ ಕಾಲೇಜು ವಿಷಯದಲ್ಲಿ ವಿದ್ಯಾರ್ಥಿಗಳೂ, ಪೋಷಕರು, ಉಪನ್ಯಾಸಕರು ನನ್ನನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿದ್ದಾರೆ. ಈ ಕಾಲೇಜನ್ನು ಮುಚ್ಚಲೆಂದೇ ನಾನು ಕುಲಪತಿಯಾಗಿ ಬಂದಿದ್ದೇನೆ ಎಂದು ಅವರೆಲ್ಲ ತಿಳಿದುಕೊಂಡಂತಿದೆ. ಯಾವುದೇ ಕಾರಣಕ್ಕೆ ನಾನು ಕಾಲೇಜನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಸರ್ಕಾರದ ನಿಯಮವನ್ನು ಪಾಲಿಸಬೇಕಾಗಿದೆಯಷ್ಟೆ. ಬನ್ನಡ್ಕ ಕಾಲೇಜನ್ನು ಸರ್ಕಾರದ ಸುಪರ್ದಿಗೆ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಮುಖಂಡ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ತಹಶಿಲ್ದಾರ್ ಶ್ರೀಧರ್ ಮುಂದಲಮನಿ, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಭಾಗವಹಿಸಿದ್ದರು.

ಕಾಲೇಜಿನ ಸಂಯೋಜಕ ಕುಮಾರ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಆಶಾ ಶಾಲೆಟ್ ಡಿಸೋಜ ನಿರೂಪಿಸಿದರು. ಸುಧಾಕರ ವಂದಿಸಿದರು.

‘ಸರ್ಕಾರದ ಸುಪರ್ದಿಗೆ ಪಡೆಯಲಿ’

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ‘ಬನ್ನಡ್ಕದ ಘಟಕ ಕಾಲೇಜು ವಿಷಯದಲ್ಲಿ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ನನ್ನನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿದ್ದಾರೆ. ಈ ಕಾಲೇಜು ಮುಚ್ಚಲೆಂದೇ ನಾನು ಕುಲಪತಿಯಾಗಿ ಬಂದಿದ್ದೇನೆ ಎಂದು ತಿಳಿದುಕೊಂಡಂತಿದೆ. ಯಾವುದೇ ಕಾರಣಕ್ಕೂ ನಾನು ಕಾಲೇಜನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಸರ್ಕಾರದ ನಿಯಮವನ್ನು ಪಾಲಿಸಬೇಕಾಗಿದೆಯಷ್ಟೆ. ಬನ್ನಡ್ಕ ಕಾಲೇಜನ್ನು ಸರ್ಕಾರದ ಸುಪರ್ದಿಗೆ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

‘ಕನಸಿನ ಯೋಜನೆ ಮುಚ್ಚದಿರಿ’

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘2021ರಲ್ಲಿ ಪ್ರಾರಂಭವಾದ ಬನ್ನಡ್ಕ ಘಟಕ ಕಾಲೇಜು ಮಂಗಳೂರು ವಿವಿಯ ಕಠಿಣ ನಿಯಮಗಳಿಂದಾಗಿ ಸಂಕಷ್ಟದಲ್ಲಿದೆ. ಕೆಲವು ವಿಭಾಗಗಳನ್ನು ರದ್ದುಪಡಿಲಾಗಿದೆ. ಕಾಲೇಜನ್ನು ಮುಚ್ಚಲಾಗುತ್ತದೆ ಎಂಬ ಅಪಪ್ರಚಾರವೂ ಕೇಳಿಬರುತ್ತಿದೆ. ನನ್ನ ಕನಸಿನ ಯೋಜನೆಯ ಈ ಕಾಲೇಜು ಯಾವುದೇ ಕಾರಣಕ್ಕೂ ಮುಚ್ಚಬಾರದು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.