ಮಂಗಳೂರು: ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನ ಅಂಗಸಂಸ್ಥೆ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ 3800 ಟಿಡಿಡಬ್ಲ್ಯು ಸಾಮರ್ಥ್ಯದ ಮೊದಲನೆಯ ಹಡಗನ್ನು ಯುರೋಪಿನ ಶಿಪ್ಪಿಂಗ್ ಕಂಪನಿಯಾದ ನಾರ್ವೆಯ ಮೆಸರ್ಸ್ ವಿಲ್ಸನ್ ಶಿಪ್ ಮ್ಯಾನೇಜ್ಮೆಂಟ್ ಎಎಸ್ಗೆ ಹಸ್ತಾಂತರಿಸಿದೆ.

ನವ ಮಂಗಳೂರು ಬಂದರಿನಲ್ಲಿ ಬುಧವಾರ ಸಂಜೆ ಹಸ್ತಾಂತರ ಸಮಾರಂಭ ನಡೆಯಿತು. ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಅವರ ಪತ್ನಿ ಸುಷ್ಮಾ ಅಕ್ಕರಾಜು, ಹೊಸ ಹಡಗಿಗೆ ನಾಮಕರಣ ಮಾಡುವ ಮೂಲಕ ಹಸ್ತಾಂತರ ಕಾರ್ಯ ನಡೆಸಿಕೊಟ್ಟರು.

ನಾರ್ವೆಯ ಮೆಸರ್ಸ್ ವಿಲ್ಸನ್ ಶಿಪ್ ಮ್ಯಾನೇಜ್ಮೆಂಟ್ ಎಎಸ್ನ ಹಿರಿಯ ಅಧಿಕಾರಿಗಳು, ಮುಖ್ಯ ಹಣಕಾಸು ಅಧಿಕಾರಿ ಐನಾರ್ ಟೋಸ್ರ್ನೆಸ್, ಅಧಿಕಾರಿಗಳಾದ ಸೆರ್ಗೆ ಬೊಗ್ಡಾಶೋವ್ ಮತ್ತು ವಿಲ್ಸನ್ ಸೈಟ್, ಸಿಎಸ್ಎಲ್ ವಹಿವಾಟು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವರಾಮ್ ಎನ್. ಸ್ವಾಮಿ ಮತ್ತು ಬ್ಯೂರೊ ವೆರಿಟಾಸ್ ಎರಿಕ್ ವೀತ್, ಯುಸಿಎಸ್ಎಲ್ ಸಿಇಓ ಎ.ಹರಿಕುಮಾರ್ ಮತ್ತು ಉಡುಪಿ ಸಿಎಸ್ಎಲ್ ತಂಡದ ಸದಸ್ಯರು ಇದ್ದರು.

‘ಇದು ಭಾರತ ಸರ್ಕಾರದ ‘ಆತ್ಮನಿರ್ಭರ ಭಾರತ್’ ಉಪಕ್ರಮಕ್ಕೆ ಅನುಸಾರವಾಗಿದೆ. ಹಡಗುಕಟ್ಟೆಯು 70 ಟಿ ಬೊಲ್ಲಾರ್ಡ್ ಪುಲ್ ಟಗ್ಗಳ ನಿರ್ಮಾಣ ಕುರಿತು ಇನ್ನೂ ಎರಡು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇವು ಭಾರತೀಯ ಶಿಪ್ಯಾರ್ಡ್ ಸಹಿ ಮಾಡಿದ ಅತಿದೊಡ್ಡ ಸರಣಿ ಟಗ್ ನಿರ್ಮಾಣ ಒಪ್ಪಂದವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.