ಶನಿವಾರ, ಸೆಪ್ಟೆಂಬರ್ 25, 2021
29 °C

ನದಿಗೆ ತ್ಯಾಜ್ಯ ನೀರು: ತಡೆಗಟ್ಟಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪಚ್ಚನಾಡಿಯ ಘನತ್ಯಾಜ್ಯ ಶೇಖರಣಾ ಪ್ರದೇಶದಿಂದ ಹರಿಯುವ ಕೊಳಚೆ ನೀರು ಫಲ್ಗುಣಿ ನದಿಗೆ ಸೇರಿ ಕಲುಷಿತಗೊಳ್ಳುವುದನ್ನು ತಡೆಯಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಸದಸ್ಯ ಎ.ಸಿ. ವಿನಯ್‌ರಾಜ್ ಎಚ್ಚರಿಕೆ ನೀಡಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಕ್ಕೆ ಸಂಗ್ರಹವಾಗುವ 250-300 ಟನ್‍ಗಳಷ್ಟು ತ್ಯಾಜ್ಯವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‍ನಲ್ಲಿ ಸುರಿಯಲಾಗುತ್ತಿದೆ. ಈ ಪ್ರದೇಶದಲ್ಲಿ ಕಸದ ಕೃತಕ ಗುಡ್ಡ ನಿರ್ಮಾಣವಾಗುತ್ತಿದೆ. ಈ ತ್ಯಾಜ್ಯದಿಂದ ಗೊಬ್ಬರ ಅಥವಾ ಇಂಧನ ಉತ್ಪಾದಿಸುವ ಬಗ್ಗೆ ಪಾಲಿಕೆ ಯೋಚಿಸಿಲ್ಲ. ಕೆಪಿಟಿಸಿಎಲ್ ₹ 150 ಕೋಟಿ ವೆಚ್ಚದಲ್ಲಿ ಪ್ರಸ್ತಾಪಿಸಿದ್ದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನೂ ಕಡೆಗಣಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಈ ಕಸದ ರಾಶಿಯಿಂದ ಕಲುಷಿತ ನೀರು, ಹತ್ತಿರದಲ್ಲಿಯೇ ಹರಿಯುವ ಫಲ್ಗುಣಿ ನದಿಗೆ ಸೇರಿ, ಮರವೂರು ಕುಡಿಯುವ ನೀರಿನ ಕಿಂಡಿ ಅಣೆಕಟ್ಟೆಯ ನೀರು ಮಲಿನಗೊಳ್ಳುತ್ತಿದೆ. ಇದನ್ನು ಕುಡಿಯುವ 15–20 ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.