ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

Published 18 ಮೇ 2024, 5:53 IST
Last Updated 18 ಮೇ 2024, 5:53 IST
ಅಕ್ಷರ ಗಾತ್ರ

ಮೂಡುಬಿದಿರೆ: ಆಹಾರ ಅಧಿಕಾರಿಗಳ ದಾಳಿಯ ಭೀತಿಯಿಂದ ವಾರದ ಸಂತೆ ದಿನವಾದ ಶುಕ್ರವಾರ ಇಲ್ಲಿನ ಪುರಸಭೆ ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣುಗಳ ಮಾರಾಟದ ಬಹುತೇಕ ವ್ಯಾಪಾರಿಗಳು ಗೈರಾಗಿದ್ದರು.

ಮಾವಿನ ಹಣ್ಣುಗಳಿದ್ದ ಎರಡು ವಾಹನಗಳು ಮಾತ್ರ ಸಂತೆಯಲ್ಲಿದ್ದವು. ರಾಸಾಯನಿಕ ಬಳಕೆ ಮಾಡದೆ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾತ್ರ ಆ ವಾಹನಗಳಲ್ಲಿ ಮಾರಾಟ ಮಾಡುವುದಾಗಿ ವ್ಯಾಪಾರಿ ತಿಳಿಸಿದರು.

ಇನ್ನೊಂದು ವಾಹನದಲ್ಲಿ ಶಿವಮೊಗ್ಗದ ಶಿಕಾರಿಪುರದಿಂದ ತಂದಿದ್ದ ಪಪ್ಪಾಯ ಹಣ್ಣುಗಳಿದ್ದವು. ಪಪ್ಪಾಯವನ್ನು ಹಣ್ಣಾಗಿಸಲು ಕಾಗದದಿಂದ ಸುತ್ತುತ್ತೇವೆ. ಮಾಗಿಸಲು ರಾಸಾಯನಿಕ ಬಳಸುವುದಿಲ್ಲ. ತಿನ್ನಲು ರುಚಿಯಾಗಿಯೂ ಇರುತ್ತದೆ ಎಂದು ವ್ಯಾಪಾರಿ ಇಕ್ಬಾಲ್ ತಿಳಿಸಿದರು.

ರಾಸಾಯನಿಕ ಮಿಶ್ರಿತ ಮಾವುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿಗೆ ಸಂಬಂಧಿಸಿ ಕಳೆದ ಶುಕ್ರವಾರ ಜಿಲ್ಲಾ ಆಹಾರ ಅಧಿಕಾರಿಗಳ ತಂಡ ಮಾರುಕಟ್ಟೆಗೆ ದಾಳಿ ಮಾಡಿ ಮಾವಿನ ಹಣ್ಣಿನ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿತ್ತು. ಮಾವಿನ ಹಣ್ಣಿನ ಬಾಕ್ಸ್‌ನಲ್ಲಿ ರಾಸಾಯನಿಕ ಪುಡಿಯೂ ಪತ್ತೆಯಾಗಿತ್ತು. ಮಾರುಕಟ್ಟೆ ಮತ್ತು ಮುಖ್ಯ ರಸ್ತೆ ಬದಿಯಲ್ಲಿ ಸುಮಾರು 10 ವಾಹನಗಳಲ್ಲಿ ಇಂಥ ಮಾವಿನ ಹಣ್ಣಿನ ವ್ಯಾಪಾರ ನಡೆಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT