ಏಕ ಬಳಕೆಯ ಪ್ಲಾಸ್ಟಿಕ್ನಿಂದ ಭೂಮಿ, ಜಲಚರಗಳ ಮೇಲಾಗುವ ಗಂಭೀರ ದುಷ್ಪರಿಣಾಮಗಳು ಹಲವು. ಇಂಚಿಂಚಾಗಿ ಭೂಮಿಯನ್ನು ನುಂಗುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್ ಲೋಟ, ತಟ್ಟೆ, ಹಾಳೆಗಳು ಮೊದಲಾದ ಸಾಮಗ್ರಿಗಳ ಬಳಕೆಯನ್ನು ಕಡಿಮೆ ಮಾಡಿ ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸುವಂತೆ ಮೂಡುಬಿದಿರೆಯ ಉಪನ್ಯಾಸಕಿ ಸಂಧ್ಯಾ ಜಾಗೃತಿ ಮೂಡಿಸುತ್ತಿದ್ದಾರೆ. ದಾನಿಗಳು, ಊರವರ ಸಹಕಾರದಿಂದ ತಮ್ಮದೇ ಆದ ಕಟ್ಲೆರಿ ಬ್ಯಾಂಕ್ ಅಂದರೆ ಪರಿಸರ ಸ್ನೇಹಿ ಸ್ಟೀಲ್ ಪಾತ್ರೆಗಳ ಭಂಡಾರವನ್ನು ಪ್ರಾರಂಭಿಸಿದ್ದಾರೆ. ಸಭೆ, ಸಮಾರಂಭಗಳಿಗೆ ಈ ಪಾತ್ರೆಗಳನ್ನು ಅವರು ಉಚಿತವಾಗಿ ಕೊಡುತ್ತಾರೆ. ಅವರು ನಡೆಸುತ್ತಿರುವ ಕಲ್ಪವೃಕ್ಷ ಕಟ್ಲೆರಿ ಬ್ಯಾಂಕ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.