ಶನಿವಾರ, ಸೆಪ್ಟೆಂಬರ್ 25, 2021
22 °C
ವಿಠಲ ಪ್ರೌಢಶಾಲೆಗೆ ಜೆರಾಕ್ಸ್ ಯಂತ್ರ ಹಸ್ತಾಂತರ

ಉಚಿತ ಶಿಕ್ಷಣ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಟ್ಲ: ‘ಜೀವನ ರೂಪಿಸಿದ ಶಾಲೆಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳದ್ದಾಗಿದೆ. ಬಡವರಿಗೆ ವಿದ್ಯೆ ನೀಡಿದಾಗ ಅವರು ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹಳೆ ವಿದ್ಯಾರ್ಥಿ ಡಾ. ವಿ.ಕೆ.ಹೆಗ್ಡೆ ಹೇಳಿದರು.

ವಿಠಲ ವಿದ್ಯಾ ಸಂಘದ ವಿಠಲ ಪ್ರೌಢಶಾಲೆಯ ವಿದ್ಯಾಪೋಷಕ ಸಮಿತಿಯ ಉಚಿತ ಶಿಕ್ಷಣ ಅಭಿಯಾನ ಉದ್ಘಾಟನೆ ಮತ್ತು ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಕೊಡುಗೆಯಾಗಿ ನೀಡಿದ ಜೆರಾಕ್ಸ್ ಯಂತ್ರದ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾಪೋಷಕ ಸಮಿತಿ ಅಧ್ಯಕ್ಷ ಬಾಬು ಕೆ. ವಿ. ಮಾತನಾಡಿ, ‘ಶಿಕ್ಷಣ ನೀತಿಗಳಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳನ್ನು ಕನ್ನಡ ಮಾಧ್ಯಮದತ್ತ ಆಕರ್ಷಿಸುವ ನಿಟ್ಟಿನಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ವಿಠಲ ವಿದ್ಯಾ ಸಂಘದ ಗೌರವಾಧ್ಯಕ್ಷ ಬಂಗಾರು ಅರಸರು, ಸಂಚಾಲಕ ಎಲ್.ಎನ್ ಕೂಡೂರು, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಉಪಾಧ್ಯಕ್ಷ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇನಸ್, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಉಪಾಧ್ಯಕ್ಷ ವಿ.ಎಸ್. ಇಬ್ರಾಹಿಂ, ಕಾರ್ಯದರ್ಶಿ ಕ್ಲಿಪರ್ಡ್ ವೇಗಸ್, ಕೋಶಾಧಿಕಾರಿ ಆ್ಯಂಟನಿ ಲೋಬೊ, ವಿಠಲ ವಿದ್ಯಾ ಸಂಘದ ಸದಸ್ಯರಾದ ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಇದ್ದರು.

ಲೀಲಾ ಪ್ರಾರ್ಥಿಸಿದರು. ಕಿರಣ್ ಕುಮಾರ್ ಬ್ರಹ್ಮಾವರ ಸ್ವಾಗತಿಸಿದರು. ಶಂಕರ್ ನಾರಾಯಣ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಹರಿ ನಿರೂಪಿಸಿದರು. ರಮೇಶ್ ಬಿ.ಕೆ. ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.