ಪುತ್ತೂರು: ತಾಲ್ಲೂಕಿನ ಮಾಡ್ನೂರು ಗ್ರಾಮ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ. ಕಾಡಾನೆ ಹಾವಳಿಯಿಂದಾಗಿ ನಷ್ಟಕ್ಕೊಳಗಾದ ಕೃಷಿಕರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಹಾಗೂ ಕಾಡಾನೆ ಹಾವಳಿ ತಡೆಯುವ ಕುರಿತು ಮಾಹಿತಿ, ಮಾರ್ಗದರ್ಶನ ಸಭೆ ಶುಕ್ರವಾರ ಮಾಡ್ನೂರು ಗ್ರಾಮದ ಕಾವಿನ ಸಮುದಾಯ ಭವನದಲ್ಲಿ ನಡೆಯಿತು.

ಭಾರತೀಯ ಕಿಸಾನ್ ಸಂಘದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸತ್ಯನಾರಾಯಣ ಅವರು ಮಾಹಿತಿ ನೀಡಿದರು.

ಭಾರತೀಯ ಕಿಸಾನ್ ಸಂಘವು ಕೃಷಿಕರಿಗೆ ಎಲ್ಲ ಸಂದರ್ಭದಲ್ಲೂ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದರು.

ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರಾಂತ ಪ್ರಮುಖರಾದ ಸುಬ್ರಾಯ, ದ.ಕ.ಜಿಲ್ಲಾ ಘಟಕದ ಕಾರ್ಯದರ್ಶಿ ರಾಮಪ್ರಸಾದ್, ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಜನಾರ್ಧನ ರೈ ಪಡ್ಡಂಬೈಲು, ಪ್ರಧಾನ ಕಾರ್ಯದರ್ಶಿ ಮಹಾಬಲ ರೈ ಕಕ್ಕುಂಜೋಡು, ತಾಲ್ಲೂಕು ಸಮಿತಿಯ ಹಿರಿಯ ಸಲಹೆಗಾರ ಮೋಹನ್ ರೈ ನರಿಮೊಗರು, ಮಹಿಳಾ ವಿಭಾಗದ ಪ್ರಮುಖ್ ನಯನಾ ರೈ ಅರಿಯಡ್ಕ, ಕೃಷಿಕ ಪರಿವಾರದ ಮುಖಂಡರಾದ ದಿವ್ಯಪ್ರಸಾದ್ ಕಾವು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.