ಪಡುಬಿದ್ರಿ: ಅನಿಯಮಿತ ವಿದ್ಯುತ್, ಮೆಸ್ಕಾಂ ಸಿಬ್ಬಂದಿ ಅನುಚಿತ ವರ್ತನೆಯಿಂದ ಬೇಸತ್ತ ಪಡುಬಿದ್ರಿ ಸುತ್ತಮುತ್ತಲ ನಾಗರಿಕರು ಸೋಮವಾರ ಬೆಳಿಗ್ಗೆ ಪಡುಬಿದ್ರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಳೆಗಾಲ ಆರಂಭಗೊಂಡಂದಿನಿಂದ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಹೆಜಮಾಡಿ, ಪಡುಬಿದ್ರಿ, ಫಲಿಮಾರು, ಎರ್ಮಾಳು ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು. ಈ ಬಗ್ಗೆ ಮೆಸ್ಕಾಂಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಮೆಸ್ಕಾಂ ಕಚೇರಿಗೆ ದೂರವಾಣಿ ಮಾಡದರೂ ಸೂಕ್ತವಾಗಿ ಸ್ಪಂದಿಸುತಿಲ್ಲ. ಮೆಸ್ಕಾಂ ಸಿಬ್ಬಂದಿ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಹೆಜಮಾಡಿ ಹಾಗೂ ಪಾದೆಬೆಟ್ಟು ಗ್ರಾಮಸ್ಥರು ಸೇರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.

ಹೆಜಮಾಡಿ ಗ್ರಾಮದಾದ್ಯಂತ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ರಿಕ್ಷಾ ಬಂದ್ ನಡೆಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಮೆಸ್ಕಾಂ ವಿರುದ್ಧ ಘೋಷಣೆ ಕೂಗಿದರು.

700ಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಮಸ್ಯೆ ಪರಿಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿಗೆ ಬೀಗ ಜಡಿಯುವ ಬೆದರಿಕೆ ಹಾಕಿದರು.

ಮೆಸ್ಕಾಂ ಎಇಇ ಸಂತೋಷ್ ನಾಯಕ್, ಮುಂದಿನ 2ದಿನದೊಳಗೆ ಈ ಭಾಗದ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿ ಬುಧವಾರ ಸಂಜೆಯೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದರು.

ಈ ಹಿಂದೆ ಹೆಜಮಾಡಿಗೆ ಮೂಲ್ಕಿ ಫೀಡರ್ನಿಂದ ವಿದ್ಯುತ್ ಸಮಸ್ಯೆಯಗುತ್ತಿದ್ದು, ಇದೀಗ ನಂದಿಕೂರು ಫೀಡರ್ಗೆ ಬದಲಾಯಿಸಲಾಗಿದೆ. ಅಂದಿನಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ಹೆಜಮಾಡಿಗೆ ಮರಳಿ ಮೂಲ್ಕಿ ಫೀಡರ್ನಿಂದ ವಿದ್ಯುತ್ ವಿತರಣೆ ಮಾಡಬೇಕೆಂದು ಗ್ರಾಮಸ್ಥರು ಈ ಸಂದರ್ಭ ಆಗ್ರಹಿಸಿದರು.

ಸಿಬ್ಬಂದಿಗೆ ತರಾಟೆ: ಮೆಸ್ಕಾಂ ಎಇಇ ಸಂತೋಷ್ ನಾಯಕ್ ಮಾತನಾಡಿ `ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಲ್ಬಣಗೊಂಡಿದ್ದು, ಬೇರೆಡೆಯಿಂದ ಸಿಬ್ಬಂದಿಯನ್ನು ಕರೆಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುವುದು. ಅಲ್ಲದೆ ಕೆಲವೊಂದು ಕಡೆ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು. ಪಡುಬಿದ್ರಿ ವಿಭಾಗದ ಎಲ್ಲ ಸಿಬ್ಬಂದಿಯನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಹಗಲು ರಾತ್ರಿ ಕಾರ್ಯನಿರ್ವಹಿಸುವಂತೆ ಆದೇಶಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಪಡುಬಿದ್ರಿ ತಾಲ್ಲೂಕು ಪಂಚಾಯಿತಿ ಸದಸ್ಯ ಭಾಸ್ಕರ್ ಪಡುಬಿದ್ರಿ, ಮಾಜಿ ಅಧ್ಯಕ್ಷ ಸುಧಾಕರ ಕರ್ಕೇರ, ಗಣೇಶ್ ಹೆಜ್ಮಾಡಿ, ಸುಭಾಸ್ ಜೆ. ಸಾಲ್ಯಾನ್, ಸೂಫಿ ಹೆಜ್ಮಾಡಿ, ರವೀಂದ್ರ ಎಚ್.ಕುಂದರ್, ವಿಕ್ರಂ ರಾಜ್ , ಅಬ್ಬಾಸ್ ಹಾಜಿ, ಭಾಸ್ಕರ ಸಾಲ್ಯಾನ್, ಕಬೀರ್, ರೂಪೇಶ್ ಶೇನೈ, ಸನಾ ಇಬ್ರಹೀಂ, ಶ್ರೀನಿವಾಸ, ನಾರಾಯಣ ಪೂಜಾರಿ, ಪಾಂಡುರಂಗ ಕರ್ಕೆರ, ಪದ್ಮನಾಭ ಸುವರ್ಣ , ಭಾಸಕರ್ ಪುತ್ರನ್, ವರದಾಕ್ಷಿ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.