ಸೋಮವಾರ, ಜೂಲೈ 6, 2020
27 °C

ದಾವಣಗೆರೆಯಲ್ಲಿ ಮೂವರು ಆಸ್ಪತ್ರೆ ಸಿಬ್ಬಂದಿ ಸೇರಿ 6 ಮಂದಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲಾ ಆಸ್ಪತ್ರೆಯ ಮೂವರು ಸಿಬ್ಬಂದಿ ಸಹಿತ 6 ಮಂದಿಯಲ್ಲಿ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ.

27 ವರ್ಷದ ಮಹಿಳೆ (ಪಿ.3070), 32 ವರ್ಷ ಮತ್ತು 22 ವರ್ಷದ ಪುರುಷರು (ಪಿ. 3071, ಪಿ. 3072) ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ಆಗಿದ್ದಾರೆ. ಅವರಿಗೆ ಯಾರ ಸಂಪರ್ಕದಿಂದ ಕೊರೊನಾ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

14 ವರ್ಷದ ಬಾಲಕಿಗೆ (ಪಿ.3073) ಆನೆಕೊಂಡದ 48 ವರ್ಷದ ವ್ಯಕ್ತಿಯಿಂದ (ಪಿ.1251) ಸೋಂಕು ಬಂದಿದೆ. 12 ವರ್ಷದ ಬಾಲಕನಿಗೆ (ಪಿ.3216) ಶಿವಕುಮಾರ ಸ್ವಾಮಿ ಬಡಾವಣೆಯ 45 ವರ್ಷದ ವ್ಯಕ್ತಿಯಿಂದ (ಪಿ.1852) ವೈರಸ್‌ ತಗುಲಿದೆ. 31 ವರ್ಷದ ಮಹಿಳೆಗೆ (ಪಿ.3217) ವಿನಾಯಕನಗರದ 69 ವರ್ಷದ ವೃದ್ಧನಿಂದ (ಪಿ.1378) ಸೋಂಕು ಬಂದಿದೆ.

ಭಾನುವಾರ 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಬಿಡುಗಡೆಯಾದವರ ಸಂಖ್ಯೆ 121ಕ್ಕೆ ಏರಿದೆ. ಒಟ್ಟು 156 ಸೋಂಕಿತರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 31 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು