ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕಮೀಷನ್ ಆಸೆಗೆ ಬಿದ್ದು ₹ 2.29 ಲಕ್ಷ ಕಳೆದುಕೊಂಡ ವಿದ್ಯಾರ್ಥಿನಿ

Last Updated 14 ಡಿಸೆಂಬರ್ 2021, 4:59 IST
ಅಕ್ಷರ ಗಾತ್ರ

ದಾವಣಗೆರೆ: ಕಮೀಷನ್ ಆಸೆಗೆ ಬಿದ್ದು, ಬಾಡ ಕ್ರಾಸ್‌ ಬಳಿಯ ಆವರಗೆರೆಯ ವಿದ್ಯಾರ್ಥಿನಿಯೊಬ್ಬರು ₹ 2.29 ಲಕ್ಷ ಕಳೆದುಕೊಂಡಿದ್ದಾರೆ.

ಪೊಲೀಸ್ ಲೇಔಟ್‌ ನಿವಾಸಿ ಸಹನಾ ಹಣ ಕಳೆದುಕೊಂಡವರು. ಅಪರಿಚಿತ ವ್ಯಕ್ತಿಯೊಬ್ಬ ಶಾಪಿಫೈ ಕಂಪನಿಯ ಪ್ರೊಡಕ್ಟ್‌ ಖರೀದಿಸಿದರೆ ಕಮಿಷನ್ ನೀಡುವುದಾಗಿ ನಂಬಿಸಿದ್ದು, ಅದನ್ನು ನಂಬಿದ ಸಹನಾ ಪೇಟಿಎಂ ಮೂಲಕ ಹಣ ವರ್ಗಾಹಿಸಿದ್ದಾರೆ.

‘ನಿಮ್ಮನ್ನು ಆನ್‌ಲೈನ್‌ ಪಾರ್ಟ್‌ ಟೈಮ್ ಹುದ್ದೆಗೆ ಆಯ್ಕೆ ಮಾಡಿದ್ದು, ಮನೆಯಲ್ಲೇ ಕೆಲಸ ಮಾಡಿ ದಿನಕ್ಕೆ ₹8 ಸಾವಿರ ಸಂಬಳ ಪಡೆಯಬಹುದು’ ಎಂದು ಅಪರಿಚಿತ ವ್ಯಕ್ತಿ ಆರಂಭದಲ್ಲಿ ನಂಬಿಸಿದ್ದು, ಟೆಲಿಗ್ರಾಂ ಆ್ಯಪ್‌ನಲ್ಲಿ ವಿವಿಧ ಪ್ರಾಡೆಕ್ಟ್‌ಗಳ ಚಿತ್ರಗಳನ್ನು ಕಳುಹಿಸಿದ್ದಾನೆ. ಇವುಗಳನ್ನು ಖರೀದಿಸಿದರೆ ಕಮೀಷನ್ ನೀಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಸಹನಾ ಅವರು ಆರಂಭದಲ್ಲಿ ₹100 ಅನ್ನು ಕಳುಹಿಸಿದ್ದಾರೆ. ಆ ವೇಳೆ ಅವರಿಗೆ ₹350 ಕಮೀಷನ್ ಬಂದಿದೆ.

ಹೆಚ್ಚಿನ ಆಸೆಯಿಂದ ₹5 ಸಾವಿರದಿಂದ ₹20 ಸಾವಿರದವರೆಗೆ 16 ಬಾರಿ ಪೇಟಿಎಂ ಮೂಲಕ ಹಣ ಕಳುಹಿಸಿದ್ದಾರೆ. ಯಾವುದೇ ಕಮೀಷನ್ ಬಾರದೇ ಇದ್ದುದರಿಂದ ಹಣ ಹಾಕುವುದನ್ನು ನಿಲ್ಲಿಸಿದ್ದಾರೆ. ಅಪರಿಚಿತ ವ್ಯಕ್ತಿ ಟಾಸ್ಕ್ ಪೂರ್ಣಗೊಳಿಸದೇ ಹಣ ವಾಪಸ್ ಬರುವುದಿಲ್ಲ ಎಂದು ತಿಳಿಸಿದಾಗ ಮೋಸದ ಜಾಲ ಎಂದು ಗೊತ್ತಾಗಿದೆ.

ಸಹನಾ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT