ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ‘ಕರುನಾಡ ಸವಿಯೂಟ’ದಲ್ಲಿ ತರಹೇವಾರಿ ಖಾದ್ಯ

Published 21 ಆಗಸ್ಟ್ 2024, 6:44 IST
Last Updated 21 ಆಗಸ್ಟ್ 2024, 6:44 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಏರ್ಪಡಿಸಿದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆ ಇಲ್ಲಿನ ಹೋಟೆಲ್‌ ಪಂಜುರ್ಲಿ ಪ್ಯಾಲೇಸ್‌ ನಲ್ಲಿ ಬುಧವಾರ ಕಾರ್ಯಾರಂಭವಾಗಿದೆ.

ನೂರಕ್ಕೂ ಹೆಚ್ಚು ಮಹಿಳೆಯರು ಮನೆಯಲ್ಲೇ ತಯಾರಿಸಿ ತಂದಿರುವ ಅಡುಗೆಯನ್ನು ಸ್ಪರ್ಧೆಗೆ ಇಟ್ಟಿದ್ದಾರೆ. ಸಸ್ಯಾಹಾರ ಹಾಗೂ ಮಾಂಸಾಹಾರದ ತರಹೇವಾರಿ ಖಾದ್ಯಗಳ ಪರಿಮಳ ಸಭಾಂಗಣ ಆವರಿಸಿದೆ. ‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ ಮತ್ತು ಸುಚಿತ್ರಾ ಅವರು ‘ಕರುನಾಡ ಸವಿಯೂಟ’ ನಡೆಸಿಕೊಡುತ್ತಿದ್ದಾರೆ.

ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳಿಂದ ಸರ್ಧಿಗಳು ಆಗಮಿಸಿದ್ದಾರೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು ಇದ್ದಾರೆ. ಅಡುಗೆ ಕೌಶಲವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಶುಚಿ-ರುಚಿಯಾದ ಹಾಗೂ ಹೊಸತನದಿಂದ ಕೂಡಿದ ತಿನಿಸುಗಳು ಕಣ್ಮನ ಸೆಳೆಯುತ್ತಿವೆ. ಸಿರಿಧಾನ್ಯ ಬಳಸಿ ಸಿದ್ಧಪಡಿಸಿದ ಅಡುಗೆ ಪದಾರ್ಥಗಳು ಇಲ್ಲಿವೆ.

ಸ್ಪರ್ಧೆ ಆರಂಭವಾಗುತ್ತಿದ್ದಂತೆ ಮನೆಯಿಂದ ತಂದಿದ್ದ ಖಾದ್ಯಗಳು ಟೇಬಲ್ ಮೇಲೆ ಬಂದವು. ಪಾತ್ರೆ, ತಟ್ಟೆ, ಚಮಚ ಸೇರಿ ಹಲವು ಪರಿಕರಗಳನ್ನು ಆಕರ್ಷಕವಾಗಿ ಜೋಡಿಸಲಾಯಿತು. ಬಹುತೇಕರು ಬಾಳೆ ಎಲೆಯಲ್ಲಿ ತಿನಿಸುಗಳನ್ನು ಪ್ರದೇಶಕ್ಕೆ ಇಟ್ಟಿದ್ದರು. ಮುರುಳಿ ಹಾಗೂ ಸುಚಿತ್ರಾ ಅವರು ಪ್ರತಿಯೊಬ್ಬ ಸ್ಪರ್ಧಿಯ ಬಳಿಗೆ ತೆರಳಿ ತಿನಿಸುಗಳ ರುಚಿ ನೋಡಿದರು.

‘3ನೇ ತರಗತಿಯಿಂದ ‘ಪ್ರಜಾವಾಣಿ’ ಓದಿತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಮಾಹಿತಿ ಹರಿದು ಬಂದರೂ ನಿತ್ಯ ಬೆಳಿಗ್ಗೆ ಪತ್ರಿಕೆ ಓದಿದರೆ ಮಾತ್ರ ತೃಪ್ತಿ ಸಿಗುತ್ತದೆ. ಪತ್ರಿಕೆಯ ಕೆಲವು ಕಾಲಂ, ಲೇಖನ ಹಾಗೂ ವರದಿಗಳು ನನ್ನ ಜ್ಞಾನ ದಾಹ ತಣಿಸಿವೆ. ಅಡುಗೆಯಷ್ಟೇ ಪತ್ರಿಕೆ ಕೂಡ ಮನೆಗೆ ಮುಖ್ಯ’ ಎಂದು ಮುರುಳಿ ಸಲಹೆ ನೀಡಿದರು.

‘ಇಂಡೇನ್’ ಅನಿಲ ಕಂಪನಿಯ ವ್ಯವಸ್ಥಾಪಕರಾದ ಭರತ್ ಮತ್ತು ವಿಜಯಲಕ್ಷ್ಮಿ ಅವರು ಅಡುಗೆ ಅನಿಲ ಸುರಕ್ಷತೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಸ್ಪರ್ಧೆಗೆ ‘ಶ್ರೀಕೃಷ್ಣ’ ಶುದ್ಧ ಹಳ್ಳಿತುಪ್ಪ, ಫಿಲಿಪ್ಸ್‌ ಜೂಸರ್ ಮಿಕ್ಸರ್‌ ಗ್ರೈಂಡರ್, ಪ್ರೀತಿ ಸಂಸ್ಥೆ, ಎಸ್‌ಎಸ್‌ಪಿ ಹಿಂಗ್, ಇಂಡಿಯಾ ಗೇಟ್‌, ವೆನ್‌ಕಾಬ್ ಚಿಕನ್ ಮತ್ತು ಸುಜಯ್ ನೀರಾವರಿ ಸಂಸ್ಥೆಯ ಸಹಯೋಗ ಒದಗಿಸಿವೆ.

‘ಪ್ರಜಾವಾಣಿ’ ಬ್ಯುರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ಜಾಹೀರಾತು ವಿಭಾಗದ ವ್ಯವಸ್ಥಾಪಕ ಪ್ರಮೋದ್ ಭಾಗವತ್, ಪ್ರಸರಣ ವಿಭಾಗದ ವ್ಯವಸ್ಥಾಪಕ ನಂದಗೋಪಾಲ್,  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT