ಹರಿಹರ: ದಾವಣಗೆರೆ ಬೀರೇಶ್ವರ ವ್ಯಾಯಾಮ ಶಾಲೆಯಲ್ಲಿ ಈಚೆಗೆ ನಡೆದ 6ನೇ ರಾಜ್ಯ ಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ (strength lifting) ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹರಿಹರದ ಬ್ರದರ್ಸ್ ಜಿಮ್ ಸತತವಾಗಿ 6ನೇ ಬಾರಿ ತಂಡ ಪ್ರಶಸ್ತಿಗೆ ಭಾಜನವಾಗಿದೆ.

ಭಾಗವಹಿಸಿದ್ದ ಜಿಮ್ಮ್ನ 21 ಜನ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು 18 ಚಿನ್ನ, 6 ಬೆಳ್ಳಿ, 1 ಕಂಚು ಸೇರಿದಂತೆ 25 ಪದಕಗಳನ್ನು ಪಡೆದುಕೊಂಡಿದ್ದಾರೆ. ಮಹಿಳಾ ಕ್ರೀಡಾಪಟು ಚೆಲುವಿ ರಾಜ್ಯ ಮಟ್ಟದ ಬಲಿಷ್ಟ ಮಹಿಳೆ-2025 ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಚಿನ್ನದ ಪದಕ ವಿಜೇತರು: ಚೆಲುವಿ, ರಂಜಿತಾ, ಶೇರ್ ಅಲಿ, ಯಾಸೀನ್ ಡಿ., ಮೆಹಬೂಬ್ ಅಲಿ, ಬಾಷಾ ಡಿ., ದಾದಾ ಕಲಂದರ್ ಮತ್ತು ವೆಂಕಟೇಶ್ ರೆಡ್ಡಿ ತಲಾ 2 ಹಾಗೂ ಸಾದಿಕ್ ಉಲ್ಲಾ, ಮೊಹಮ್ಮದ್ ನವಾಜ್ ತಲಾ 1 ಚಿನ್ನದ ಪಕದ ಗೆದ್ದಿದ್ದಾರೆ.

ಬೆಳ್ಳಿ, ಕಂಚು ಪದಕ ವಿಜೇತರು: ರಾಘವೇಂದ್ರ ಹಾಗೂ ರಿಹಾನ್ ತಲಾ 2, ರಮೇಶ್ ಮತ್ತು ಮೊಹಮದ್ ನವಾಜ್ ತಲಾ 1 ಬೆಳ್ಳಿ ಪದಕ, ಮಹಾಂತೇಶ್ 1 ಕಂಚಿನ ಪದಕ ಗಳಿಸಿದ್ದಾರೆ.

ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ಜಿಮ್ನ ಕ್ರೀಡಾಪಟುಗಳು ನವೆಂಬರ್ನಲ್ಲಿ ಸಿಕ್ಕಿಂನಲ್ಲಿ ನಡೆಯುವ ರಾಷ್ಟೀಯ ಸ್ಟ್ರೆಂಥ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವರು.

ಸಾಧಕ ಕ್ರೀಡಾಪಟುಗಳಿಗೆ ಮಾಜಿ ಶಾಸಕ ಎಸ್.ರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಅರ್.ಸಿ. ಜಾವೀದ್, ಡಾ.ನಜೀಬ್ ಉಲ್ಲಾ, ರೋಷನ್ ಅಲಿ, ಭಾನುವಳ್ಳಿ ದಾದಾಪೀರ್, ಜಿಮ್ ಸಂಚಾಲಕ ಹಾಗೂ ಅಂತರರಾಷ್ಟ್ರೀಯ ಬಾಡಿ ಬಿಲ್ಡರ್ ಅಕ್ರಂಬಾಷಾ, ತರಬೇತುದಾರ ಮೊಹಮ್ಮದ್ ರಫೀಕ್ ಹಾಗೂ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.