ಹೊನ್ನಾಳಿ: ‘ಜಾತಿ ಸಮೀಕ್ಷೆಗೆ ಬಂದಾಗ ಜಾತಿಯ ಕಾಲಂನಲ್ಲಿ ಕುರುಬ ಎಂದಷ್ಟೇ ಬರೆಸಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು’ ಎಂದು ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಸಮೀಕ್ಷಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿರುವ ಪ್ರತಿಯೊಂದು ಜಾತಿ ಜನಾಂಗ ಎಷ್ಟಿದೆ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಎಷ್ಟು ಹಿಂದುಳಿದಿದ್ದಾರೆ ಎಂದು ತಿಳಿಯುವುದೇ ಈ ಸಮೀಕ್ಷೆಯ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ನಮ್ಮ ಕುರುಬ ಸಮಾಜಕ್ಕೂ ಅನುಕೂಲವಾಗಲಿದೆ. ಆದ್ದರಿಂದ ನಮ್ಮ ಜನಾಂಗ ಜಾತಿಯ ಹೆಸರಿನ ಜೊತೆಗೆ ಕುಲಕಸುಬನ್ನು ಬರೆಸಬೇಕು, ಇದರಿಂದ ನಮ್ಮ ಜನಾಂಗದ ನಿಖರ ಅಂಕಿ ಸಂಖ್ಯೆಗಳ ಜೊತೆಗೆ ಆರ್ಥಿಕ ಸ್ಥಾನಮಾನವೂ ತಿಳಿದುಬರಲಿದೆ’ ಎಂದರು.

‘ನಮ್ಮವರ ಉದ್ಯೋಗ ಕುರಿ ಕಾಯುವುದು, ಗಾರೆ ಕೆಲಸ, ಕೂಲಿ ಕೆಲಸವೇ ಮುಖ್ಯವಾಗಿದೆ. ಇಂಥವರ ಮನೆಗಳಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸವನ್ನು ಶಿಕ್ಷಣ ಪಡೆದ ನಮ್ಮ ಯುವಕರು ಮಾಡಬೇಕಾಗಿದೆ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ನಮ್ಮ ಕುರುಬ ಸಮಾಜದವರು ಒಂದೇ ಒಂದು ಮನೆಯನ್ನು ಬಿಡದಂತೆ ಸಮೀಕ್ಷೆಗೊಳಪಡಿಸಬೇಕು, ಸರ್ವೇ ಕಾರ್ಯ ಈ ಬಾರಿ ವ್ಯರ್ಥವಾಗಬಾರದು’ ಎಂದು ಮುಖಂಡ ಬಿ. ಸಿದ್ದಪ್ಪ ತಿಳಿಸಿದರು.

ಸಭೆಯಲ್ಲಿ ಕುರುಬ ಸಮಾಜದ ಕಾರ್ಯಾಧ್ಯಕ್ಷ ಬಾಬು, ಉಪಾಧ್ಯಕ್ಷ ಗಾಳಿ ನಾಗರಾಜ್, ಮುಖಂಡರಾದ ಎಸ್.ಎಸ್. ಬೀರಪ್ಪ, ಇಂಚರ ನವೀನ್, ಇಂಚರ ಮಂಜುನಾಥ್, ಪುರಸಭೆ ಸದಸ್ಯ ರಂಗನಾಥ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಎಸ್. ರಂಜಿತ್, ಕುಂಬಳೂರು ಬೀರಪ್ಪ,ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮನು ವಾಲಜ್ಜಿ, ರಾಜುಕಡಗಣ್ಣಾರ್, ರಾಘವೇಂದ್ರ, ಪಿರಿಗಿ ಹಳದಪ್ಪ, ಕರವೇ ಅಧ್ಯಕ್ಷ ಶ್ರೀನಿವಾಸ್, ಗುಡ್ಡಜ್ಜಿ ಮೂರ್ತೆಪ್ಪ, ತಮ್ಮಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.