ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ ಮನುಕುಲಕ್ಕೆ ದೊಡ್ಡ ಆಶೀರ್ವಾದ

ಚನ್ನಗಿರಿ: ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
Published : 12 ಸೆಪ್ಟೆಂಬರ್ 2024, 14:32 IST
Last Updated : 12 ಸೆಪ್ಟೆಂಬರ್ 2024, 14:32 IST
ಫಾಲೋ ಮಾಡಿ
Comments

ಚನ್ನಗಿರಿ: ‘ಅಜ್ಞಾನ, ಸಂಕಟ, ಕಷ್ಟ, ದುಃಖಗಳನ್ನು ನಿವಾರಿಸಿ ನಮ್ಮ ಶ್ರಮವನ್ನು ಹಗುರಗೊಳಿಸಲು ವಿಜ್ಞಾನ ಬಂದಿದೆ. ವಿಜ್ಞಾನ ಮನುಷ್ಯನ ನಿಷ್ಟಾವಂತ ಸೇವಕ. ಇದು ನಮ್ಮ ದೈನಂದಿನ ಬದುಕನ್ನು ಮಾರ್ಪಡಿಸಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ತಿಳಿಸಿದರು.

ಪಟ್ಟಣದ ಮಾರುತಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ತಾಲ್ಲೂಕುಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ವಸ್ತು ಪ್ರದರ್ಶನಗಳು ಪ್ರಮುಖ ಪಾತ್ರ ವಹಿಸುತ್ತದೆ. ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹುಟ್ಟುಹಾಕುತ್ತವೆ. ವಿದ್ಯಾರ್ಥಿಗಳ ಆಲೋಚನೆ ಹಾಗೂ ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತವೆ’ ಎಂದರು.

ಮಾರುತಿ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ರಾಜಪ್ಪ, ಮುಖ್ಯಶಿಕ್ಷಕ ಎಂ.ಆರ್. ಸಂತೋಷ್ ಕುಮಾರ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ.ಸ್ವಾಮಿ, ಬಿಆರ್‌ಸಿ ಎಸ್.ಶಂಕರಪ್ಪ, ವಿಜ್ಞಾನ ನೋಡಲ್ ಅಧಿಕಾರಿ ಬಿ.ಎಂ.ಪರಮೇಶ್ವರಪ್ಪ, ಶಿಕ್ಷಣ ಸಂಯೋಜಕಿ ಎಂ.ರಶ್ಮಿ, ಶಿಕ್ಷಕರಾದ ಜಿ.ನಾಗರಾಜ್, ಸಿ.ಮಹೇಶ್, ಎನ್.ಜಿ.ಸುರೇಶ್, ಕಲಿವೀರಪ್ಪ, ಆರ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT