ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾಂಗ್ರೆಸ್‌–ಬಿಜೆಪಿ ಹಿತಾಸಕ್ತಿ ಸಂಘರ್ಷಕ್ಕೆ ದಾಳವಾದ ‘ಸ್ಮಾರ್ಟ್‌ ಸಿಟಿ’ ಯೋಜನೆ

Published : 29 ಜುಲೈ 2024, 7:18 IST
Last Updated : 29 ಜುಲೈ 2024, 7:18 IST
ಫಾಲೋ ಮಾಡಿ
Comments
ಬಿಜೆಪಿ ಚಿಹ್ನೆ
ಬಿಜೆಪಿ ಚಿಹ್ನೆ
ಕೇಂದ್ರ ಸರ್ಕಾರದ ಈ ಯೋಜನೆ ಸಾರ್ವಜನಿಕರ ಬಳಕೆಗೆ ಲಭ್ಯವಾದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. ಯೋಜನೆಗಳ ಸುಪರ್ದಿಗೆ ವಿಳಂಬ ನಿರ್ವಹಣೆಗೆ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರುತ್ತಿದೆ.
ಕೆ.ಪ್ರಸನ್ನಕುಮಾರ್‌ ವಿರೋಧ ಪಕ್ಷದ ನಾಯಕ ಮಹಾನಗರ ಪಾಲಿಕೆ
ನಿಲ್ದಾಣ ನಾಮಕರಣದಲ್ಲೂ ಜಟಾಪಟಿ
‘ಸ್ಮಾರ್ಟ್ ಸಿಟಿ’ ಯೋಜನೆಯಡಿ ನೂತನವಾಗಿ ನಿರ್ಮಿಸಿದ ಖಾಸಗಿ ಬಸ್‌ ನಿಲ್ದಾಣದ ನಾಮಕರಣದಲ್ಲಿ ಕೂಡ ಕಾಂಗ್ರೆಸ್‌ ಮತ್ತು ಬಿಜೆಪಿ ಜಟಾಪಟಿ ನಡೆಸಿವೆ. ಈ ಹಿಂದೆ ಇದ್ದ ‘ಶಾಮನೂರು ಶಿವಶಂಕರಪ್ಪ ಬಸ್‌ ನಿಲ್ದಾಣ’ ಹೆಸರಿನಲ್ಲಿಯೇ ಹೊಸ ಬಸ್‌ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಪಿ.ಬಿ.ರಸ್ತೆಯಲ್ಲಿರುವ ಖಾಸಗಿ ಬಸ್‌ ನಿಲ್ದಾಣದ ರೂಪುರೇಷ ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಸಿದ್ಧವಾಗಿತ್ತು. ಕಾಮಗಾರಿ ಆರಂಭವಾದಾಗ ಅಧಿಕಾರ ಬಿಜೆಪಿ ಕೈಯಲ್ಲಿತ್ತು. ಹೊಸ ಬಸ್‌ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೆಸರು ಇಡುವ ಪ್ರಯತ್ನಕ್ಕೆ ಕೈಹಾಕಿತು. ಮಹಾನಗರ ಪಾಲಿಕೆಯ ತುರ್ತು ಸಭೆ ಕರೆದು ನಿರ್ಣಯ ಕೈಗೊಂಡಿತು. ಇದು ಕಾಂಗ್ರೆಸ್‌ ಜನಪ್ರತಿನಿಧಿಗಳನ್ನು ಕೆಣಕಿತು. ‘ಶಾಮನೂರು ಶಿವಶಂಕರಪ್ಪ ಅವರ 75ನೇ ಜನ್ಮದಿನದ ಅಂಗವಾಗಿ 2004–05ರಲ್ಲಿ ಖಾಸಗಿ ಬಸ್‌ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿತ್ತು. ಮಹಾನಗರ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ನವೀಕರಣಗೊಂಡ ಬಳಿಕ ಬಿಜೆಪಿ ಹೊಸ ತಗಾದೆ ತೆಗೆದಿತ್ತು. ಆದರೆ ಇದರಲ್ಲಿ ಬಿಜೆಪಿಗೆ ಯಶಸ್ಸು ಸಿಗಲಿಲ್ಲ’ ಎನ್ನುತ್ತಾರೆ ‘ಸ್ಮಾರ್ಟ್‌ ಸಿಟಿ’ ಸದಸ್ಯರೂ ಆಗಿರುವ ಪಾಲಿಕೆ ಸದಸ್ಯ ಎ.ನಾಗರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT