ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಆರೋಪಿಯಿಂದ ಲಂಚ ಪಡೆದ ಕಾನ್‌ಸ್ಟೆಬಲ್ ಅಮಾನತು

Published 8 ಡಿಸೆಂಬರ್ 2023, 5:23 IST
Last Updated 8 ಡಿಸೆಂಬರ್ 2023, 5:23 IST
ಅಕ್ಷರ ಗಾತ್ರ

ದಾವಣಗೆರೆ: ಪೋಕ್ಸೊ ಕಾಯ್ದೆಯಡಿ ಬಂಧಿಸಿ ಠಾಣೆಗೆ ಕರೆತಂದಿದ್ದ ಆರೋಪಿಯಿಂದ ಲಂಚ ಪಡೆದ ಆರೋಪದ ಮೇರೆಗೆ ಹರಿಹರ ನಗರ ಠಾಣೆಯ ಕಾನ್‌ಸ್ಟೆಬಲ್ ಮಂಜುನಾಥ್‌ ಬಿ.ವಿ. ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಈಚೆಗೆ ಅಮಾನತು ಮಾಡಿದ್ದಾರೆ.

ಆರೋಪಿ ಠಾಣೆಗೆ ಬಂದಾಗ ಮಂಜುನಾಥ್ ನಿನ್ನ ಮೇಲೆ ಪೊಕ್ಸೊ ಕೇಸ್ ಜಡೀತಿನಿ ಎಂದು ಶಬ್ಧಗಳಿಂದ ನಿಂದಿಸಿ ಠಾಣೆಯಲ್ಲಿ ₹12,000 ಪಡೆದಿದ್ದರು. ಅಲ್ಲದೇ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಆರೋಪಿಯ ಬಳಿ ಇದ್ದ ಮೊಬೈಲ್ ಕಸಿದುಕೊಂಡು ಪೋನ್ ಪೇಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತೋರಿಸು ಎಂದಾಗ ಆರೋಪಿಯ ಖಾತೆಯಲ್ಲಿ ₹25 ಸಾವಿರ ಇತ್ತು. ಆರೋಪಿಗೆ ಪಿನ್‌ ನಂಬರ್ ಡಯಲ್ ಮಾಡಿ ಆ ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡರು. ಆರೋಪಿಯ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ಹರಿಹರ ನಗರ ಇನ್ಸ್ ಪೆಕ್ಟರ್ ದೇವಾನಂದ್ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಇದನ್ನು ಎಸ್‌ಪಿ ಉಮಾ ಪ್ರಶಾಂತ್ ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT