ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ಗೆ ಒಳಪಡಿಸಲಾಗಿದೆ. ಪ್ರಕರಣವು ತನಿಖಾ ಹಂತದಲ್ಲಿದ್ದು ಶೀಘ್ರವೇ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು
ಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಾವಣಗೆರೆ
ಮೊಬೈಲ್ ಬಳಕೆದಾರರು ಎಲ್ಲಾ ರೀತಿಯ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ವಾಟ್ಸ್ ಆ್ಯಪ್ ಸಂದೇಶದ ಮೂಲಕ ಬಂದ ಆ್ಯಪ್‌ಗಳಿಗೆ ಅನುಮತಿ ನೀಡುವ ಮುನ್ನ ಪರಿಶೀಲಿಸಬೇಕು. ಎಪಿಕೆ ಫೈಲ್‌ಗಳನ್ನು ಕ್ಲಿಕ್ ಮಾಡಬಾರದು
ಬಂಕಾಳಿ ನಾಗಪ್ಪ ಡಿವೈಎಸ್‌ಪಿ ಸೈಬರ್ ಅಪರಾಧ ಠಾಣೆ ದಾವಣಗೆರೆ
ಮೆಸೇಜ್ ಕೂಡ ಬಂದಿರಲಿಲ್ಲ!
ಕಂಪನಿಯ ಬ್ಯಾಂಕ್ ಖಾತೆಯಲ್ಲಿದ್ದ ₹ 52.60 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವಂಚಿಸಿದ ವಿಷಯವು ಹಲವು ದಿನಗಳ ಬಳಿಕ ಪ್ರಮೋದ್ ಅವರಿಗೆ ಗೊತ್ತಾಗಿತ್ತು. ಮೊಬೈಲ್ ಹ್ಯಾಕ್ ಮಾಡಿದ್ದ ಆರೋಪಿಗಳು ಬ್ಯಾಂಕ್ ವಹಿವಾಟಿನ ಯಾವುದೇ ಮೆಸೇಜ್‌ಗಳೂ ಪ್ರಮೋದ್ ಅವರಿಗೆ ಹೋಗದಂತೆ ನೋಡಿಕೊಂಡಿದ್ದರು. ಸಾಮಾನ್ಯವಾಗಿ ಬ್ಯಾಂಕ್ ವಹಿವಾಟು ನಡೆಸುವಾಗ ಸಂಬಂಧಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತವೆ. ಆದರೆ ಪ್ರಮೋದ್ ಅವರ ಮೊಬೈಲ್‌ಗೆ ಒಟಿಪಿ ಸೇರಿದಂತೆ ಯಾವುದೇ ಮೆಸೇಜ್ ಬಂದಿರಲಿಲ್ಲ. ನೆಟ್ ಬ್ಯಾಂಕಿಂಗ್ ಸಾಧ್ಯವಾಗದ ಕಾರಣಕ್ಕೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ ಬಳಿಕವೇ ಆನ್‌ಲೈನ್ ಮೂಲಕ ವಂಚನೆ ನಡೆದಿರುವುದು ಪ್ರಮೋದ್ ಅವರಿಗೆ ಗೊತ್ತಾದ ಬಳಿಕವೇ ಈ ವಂಚಕರ ಜಾಲ ಬೆಳಕಿಗೆ ಬಂತು.
ದಾಳವಾಗಿ ಬಳಕೆ..
ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರಿಗೆ ಹಾಸನ ಜಿಲ್ಲೆಯ ಬೇಲೂರಿನ ಸೈಯದ್ ಅರ್ಫಾತ್ ಪಾಷ ಸಿಕ್ಕಿಬಿದ್ದಿದ್ದಾನೆ. ಈ ಆರೋಪಿಯನ್ನು ದಾಳವಾಗಿ ಬಳಸಿಕೊಂಡು ಮುಖ್ಯ ಆರೋಪಿಯು ಕೃತ್ಯ ಎಸಗಿದ್ದು ಬೆಳಕಿಗೆ ಬಂದಿದೆ. ಇವರ ಹಿಂದೆ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದೆ. ಕೆಲವು ವಂಚಕರು ಬೇರೆಡೆಯಿಂದ ಹ್ಯಾಕರ್‌ಗಳನ್ನು ಕರೆತಂದು ಉದ್ಯಮಿಗಳು ನಿವೃತ್ತ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿರುವ ಮಾಹಿತಿಯೂ ಇದೆ. ಲಾಭದ ದುರಾಸೆಗೆ ಸುಶಿಕ್ಷಿತರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.