ಭಾನುವಾರ, ಜುಲೈ 25, 2021
27 °C

ಕೋವಿಡ್‌ ಗೆದ್ದ ಎರಡೂವರೆ ತಿಂಗಳ ಮಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಎರಡೂವರೆ ತಿಂಗಳ ಮಗು ಹಾಗೂ ತಾಯಿ ಸೇರಿ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಶುಕ್ರವಾರ ಯಾವುದೇ ಕೋವಿಡ್‌–19 ಪ್ರಕರಣ ದೃಢಪಟ್ಟಿಲ್ಲ.

ಜಾಲಿನಗರದ ಸುರೇಶ್‌ನಗರದ ಎರಡೂವರೆ ತಿಂಗಳ ಹೆಣ್ಣು ಮಗು (ಪಿ.3638) ಹಾಗೂ 30 ವರ್ಷದ ಅವರ ತಾಯಿ (ಪಿ.3640) ಹಾಗೂ 27 ವರ್ಷದ ಪುರುಷ (ಪಿ.4339) ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 223 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 171 ರೋಗಿಗಳು ಸಂಪೂರ್ಣರಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 6 ಸಾವು ಸಂಭವಿಸಿದ್ದು, ಒಟ್ಟು 46 ಸಕ್ರಿಯ ಪ್ರಕರಣಗಳು ಇವೆ.

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿ ನೀಡಿದ್ದಾರೆ. ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಬೇಗ ಗುಣಮುಖರಾಗಿ ಹೋಗುತ್ತಿರುವುದು ಖುಷಿಯಾಗಿದೆ. ವೈದ್ಯರು ಹಾಗೂ ನರ್ಸ್‌ಗಳ ಶ್ರಮದಿಂದಲೇ ಬೇಗ ಮನೆಗೆ ಹೋಗುತ್ತಿದ್ದೇನೆ’ ಎಂದು ಮಗುವಿನ ತಾಯಿ ವಿಡಿಯೊದಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು