ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಲಿತ ಜೀವನ ರಾಜ್ಯದಲ್ಲೇ ದಾವಣಗೆರೆ ಬೆಸ್ಟ್

ದೇಶದಲ್ಲಿ 9ನೇ ಸ್ಥಾನ; ಸ್ಮಾರ್ಟ್‌ ಸಿಟಿಯಿಂದ ಆನ್‌ಲೈನ್ ಸಮೀಕ್ಷೆ
Last Updated 6 ಮಾರ್ಚ್ 2021, 2:10 IST
ಅಕ್ಷರ ಗಾತ್ರ

ದಾವಣಗೆರೆ: ಸುಲಲಿತ ಜೀವನ ಸೂಚ್ಯಂಕ–2019ದಲ್ಲಿ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ ದಾವಣಗೆರೆ ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದಿದ್ದು, ದೇಶದಲ್ಲಿ 9ನೇ ಸ್ಥಾನ ಪಡೆದಿದೆ. 10 ಲಕ್ಷ ಜನಸಂಖ್ಯೆ ಮೇಲಿನ ನಗರಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಒ.ಎಚ್.ಯು.ಎ) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ದೃಢಪಟ್ಟಿದ್ದು, ಸಚಿವಾಲಯ ಗುರುವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಫೆಬ್ರುವರಿ 2020ರಲ್ಲಿ ಸ್ಮಾರ್ಟ್ ಸಿಟಿವತಿಯಿಂದ ಆನ್‌ಲೈನ್ ಸಮೀಕ್ಷೆ ನಡೆಸಲಾಗಿತ್ತು.

ಮಾನದಂಡ ಏನು?: ‘ಜನರಿಗೆ ಸುಲಲಿತ ಜೀವನ ನಡೆಸಲು ಬೇಕಾದ ಆರೋಗ್ಯ, ಶಿಕ್ಷಣ, ರಸ್ತೆ, ಕುಡಿಯುವ ನೀರು, ಸಂವಹನ ಸೌಲಭ್ಯ, ಸಾರಿಗೆ ಸೇರಿ ಮೂಲಸೌಲಭ್ಯಗಳನ್ನು ಆಧರಿಸಿ ಈ ಸಮೀಕ್ಷೆ ಮಾಡಲಾಗುತ್ತದೆ’ಸ್ಮಾರ್ಟ್‌ಸಿಟಿ ಎಂಡಿ ರವೀಂದ್ರ ಮಲ್ಲಾಪುರ ಅವರುತಿಳಿಸಿದರು.

2019ರ ಸಮೀಕ್ಷೆಯಲ್ಲಿ 111 ನಗರಗಳಲ್ಲಿ 100 ಸ್ಮಾರ್ಟ್‌ಸಿಟಿಗಳು ಭಾಗವಹಿಸಿದ್ದವು.

ರಾಜ್ಯದ ಮಂಗಳೂರು. ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ಬಾಗಲಕೋಟೆ, ತುಮಕೂರು, ಬೆಳಗಾವಿ ನಗರಗಳು ಪಾಲ್ಗೊಂಡಿದ್ದವು. 2017ರ ಸಮೀಕ್ಷೆಯಲ್ಲಿ 100 ಸ್ಮಾರ್ಟ್‌ ನಗರಗಳಲ್ಲಿ ದಾವಣಗೆರೆ 83ನೇ ಸ್ಥಾನದಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT