ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮನೆಯಲ್ಲೇ ಸರಳವಾಗಿ ಈದ್ ಉಲ್ ಫಿತ್ರ್ ಆಚರಣೆ

Last Updated 25 ಮೇ 2020, 9:57 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಮುಸ್ಲಿಮರು ಸೋಮವಾರ ಮನೆಯಲ್ಲೇ ಸರಳವಾಗಿ ಈದ್‌–ಉಲ್‌–ಫಿತ್ರ್‌ ಆಚರಿಸಿದರು.

ಪ್ರತಿ ವರ್ಷ ಇಲ್ಲಿನ ಪಿ.ಬಿ.ರಸ್ತೆಯ ಬಳಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಸೀಮಿತ ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.

ವಕ್ಫ್ ಬೋರ್ಡ್ ಹಾಗೂ ಮಸೀದಿಯ ಸಮಿತಿಯ ಆದೇಶದ ಮೇರೆಗೆ ಮುಸ್ಲಿಮರು ಕುಟುಂಬದ ಸದಸ್ಯರ ಜೊತೆ ಮನೆಯಲ್ಲೇ ಪ್ರಾರ್ಥಿಸಿದರು.

ಮಕ್ಕಳು, ಮಹಿಳೆಯರು, ಹಿರಿಯರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಸ್ಥಿತಿವಂತರು ಬಡವರಿಗೆ ಹಣ, ಬಟ್ಟೆ, ದಿನಸಿ ಸೇರಿ ವಿವಿಧ ವಸ್ತುಗಳನ್ನು ದಾನವಾಗಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT