ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ವಿವಿ: ಬಿ.ಬಿ.ಎಂಗೆ ಶೇ 74 ಫಲಿತಾಂಶ

ಪದವಿ ಫಲಿತಾಂಶ ಪ್ರಕಟ* ಬಿ.ಎ.ನಲ್ಲಿ 8386 ವಿದ್ಯಾರ್ಥಿಗಳು ಫೇಲ್
Last Updated 1 ಆಗಸ್ಟ್ 2021, 3:37 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಪದವಿಯ ಒಂದು, ಮೂರು ಹಾಗೂ 5ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು, ಅವರಲ್ಲಿ ಬಿ.ಬಿ.ಎಂ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಿ.ಎ. ವಿದ್ಯಾರ್ಥಿಗಳು ಕಡಿಮೆ ಫಲಿತಾಂಶ ಪಡೆದಿದ್ದಾರೆ.

ಬಿ.ಎ ಒಂದನೇ ಸೆಮಿಸ್ಟರ್‌ನಲ್ಲಿ 6,776 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 3160 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ 46.92 ಫಲಿತಾಂಶ ಬಂದಿದೆ. 3ನೇ ಸೆಮಿಸ್ಟರ್‌ನಲ್ಲಿ 2,385 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 37.82 ಹಾಗೂ 5ನೇ ಸೆಮಿಸ್ಟರ್‌ನಲ್ಲಿ 2,964 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 76.91 ಫಲಿತಾಂಶ ಬಂದಿದೆ. ಈ ಮೂರು ಸೆಮಿಸ್ಟರ್‌ಗಳಿಂದ 8,509 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ 50.36 ಫಲಿತಾಂಶ ಬಂದಿದೆ.

ಬಿ.ಬಿ.ಎಂನಲ್ಲಿ ಮೂರು ಸೆಮಿಸ್ಟರ್‌ಗಳಲ್ಲಿ 332 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ 74.27 ಫಲಿತಾಂಶ ಬಂದಿದೆ. ಮೊದಲ ಸೆಮಿಸ್ಟರ್‌ನಲ್ಲಿ 16, ಮೂರರಲ್ಲಿ 32 ಹಾಗೂ 5ನೇ ಸೆಮಿಸ್ಟರ್‌ನಲ್ಲಿ 284 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕ್ರಮವಾಗಿ ಶೇ 39.02, ಶೇ 53.33 ಹಾಗೂ ಶೇ 82.08 ಫಲಿತಾಂಶ ಬಂದಿದೆ.

ಬಿ.ಬಿ.ಎ ಮೊದಲ ಸೆಮಿಸ್ಟರ್‌ನಲ್ಲಿ 244 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಶೇ 58.94, ಮೂರರಲ್ಲಿ 239 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ 73.31 ಫಲಿತಾಂಶ ಬಂದಿದೆ. ಒಟ್ಟು 483 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 65.27 ಫಲಿತಾಂಶ ಬಂದಿದೆ.

ಬಿ.ಸಿ.ಎ ವಿಷಯದಲ್ಲಿ ಈ ಮೂರು ಸೆಮಿಸ್ಟರ್‌ಗಳಿಂದ 1910 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟು ಶೇ 69.28 ಫಲಿತಾಂಶ ಬಂದಿದೆ. ಮೊದಲ ಸೆಮಿಸ್ಟರ್‌ನಲ್ಲಿ 646, ಮೂರರಲ್ಲಿ 673 ಹಾಗೂ 5ನೇ ಸೆಮಿಸ್ಟರ್‌ನಲ್ಲಿ 591 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕ್ರಮವಾಗಿ ಶೇ ಶೇ 63.27, ಶೇ 71,14 ಹಾಗೂ ಶೇ 74.81 ಫಲಿತಾಂಶ ಬಂದಿದೆ.

ಬಿ.ಕಾಂನಲ್ಲಿ ಮೊದಲ ಸೆಮಿಸ್ಟರ್‌ನಲ್ಲಿ 3,030 ಮಂದಿ ತೇರ್ಗಡೆಯಾಗಿದ್ದು, ಶೇ 48.15, ಮೂರನೇ ಸೆಮಿಸ್ಟರ್‌ನಲ್ಲಿ 3,429 ಮಂದಿ ತೇರ್ಗಡೆಯಾಗಿ ಶೇ 66.13ರಷ್ಟು ಫಲಿತಾಂಶ ಬಂದಿದೆ. 5ನೇ ಸೆಮಿಸ್ಟರ್‌ನಲ್ಲಿ 3,182 ವಿದ್ಯಾರ್ಥಿಗಳು ಶೇ 71.28 ಫಲಿತಾಂಶ ಪಡೆದಿದ್ದಾರೆ. ಒಟ್ಟಾರೆಯಾಗಿ 9,641 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ 60.48 ಫಲಿತಾಂಶ ಬಂದಿದೆ.

ಬಿ.ಎಸ್ಸಿಯಲ್ಲಿ ಈ ಮೂರು ಸೆಮಿಸ್ಟರ್‌ಗಳಲ್ಲಿ 4,901 ಮಂದಿ ಉತ್ತೀರ್ಣರಾಗಿದ್ದು, ಶೇ 51.29 ಫಲಿತಾಂಶ ಬಂದಿದೆ. ಮೊದಲ ಸೆಮಿಸ್ಟರ್‌ನಲ್ಲಿ 1391, ಮೂರರಲ್ಲಿ 1622 ಹಾಗೂ 5ರಲ್ಲಿ 1888 ಮಂದಿ ತೇರ್ಗಡೆಯಾಗಿದ್ದು, ಕ್ರಮವಾಗಿ ಶೇ 33.46, ಶೇ 54.52 ಹಾಗೂ ಶೇ 63.72 ಫಲಿತಾಂಶ ಬಂದಿದೆ.

ಬಿ.ಎಸ್.ಡಬ್ಲು ವಿಷಯದಲ್ಲಿ ಮೂರು ಸೆಮಿಸ್ಟರ್‌ಗಳಿಂದ 24 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ 58.54 ಫಲಿತಾಂಶ ಬಂದಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಅಂಕಿ ಅಂಶ

46565

ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

238

ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ

20577

ವಿದ್ಯಾರ್ಥಿಗಳು ಅನುತ್ತೀರ್ಣರಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT