ನ್ಯಾಮತಿ: ಪಟ್ಟಣದ ಮೂಲಕ ಹಾದುಹೋಗಿರುವ ಕುಮಟಾ-ಕಾರಮಡಗಿ ಹೆದ್ದಾರಿ ಹದಗೆಟ್ಟಿದ್ದು, ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಹೊನ್ನಾಳಿ–ನ್ಯಾಮತಿ ಮಾರ್ಗದ ಮಾದನಬಾವಿ-ನ್ಯಾಮತಿ ಹಾಗೂ ಸುರಹೊನ್ನೆ-ಸವಳಂಗ ಮಾರ್ಗದಲ್ಲಿ ಗುಂಡಿ ಬಿದ್ದಿದೆ. ಈ ರಸ್ತೆಯಲ್ಲಿ ವಾಹನ ಸವಾರರು ಓಡಾಡುವುದು ದುಸ್ತರವಾಗಿದೆ. ಗುಂಡಿ ಕಾಣದೇ ರಾತ್ರಿ ವೇಳೆ ಹಲವು ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಸವಳಂಗದ ಟೋಲ್ಗೇಟ್ನಲ್ಲಿ ಹೆದ್ದಾರಿ ಶುಲ್ಕ ಪಾವತಿಸುತ್ತಾರೆ. ಶುಲ್ಕ ಪಡೆಯುವ ಹೆದ್ದಾರಿ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಇಲಾಖೆಯವರು ಶೀಘ್ರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಮೆರವಣಿಗೆ ಜಗದೀಶ, ಗಡೆಕಟ್ಟೆ ನಿಜಲಿಂಗಪ್ಪ, ಡಿ.ಎಂ.ಮಲ್ಲಿಕಾರ್ಜುನ, ಮರುಳ, ಚೇತನ, ಮಂಜುನಾಥ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.