ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಡಕಚೇರಿ ಬೇರೆಡೆಗೆ ಸ್ಥಳಾಂತರ ಮಾಡದಿರಲು ಒತ್ತಾಯ

Published : 2 ಅಕ್ಟೋಬರ್ 2024, 14:36 IST
Last Updated : 2 ಅಕ್ಟೋಬರ್ 2024, 14:36 IST
ಫಾಲೋ ಮಾಡಿ
Comments

ತಾವರೆಕೆರೆ (ಚನ್ನಗಿರಿ): ಗ್ರಾಮದ ನಾಡಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಕಂದಾಯ ಇಲಾಖೆ ಮುಂದಾಗಿದ್ದು, ಇಲ್ಲಿಯೇ ಉಳಿಸಬೇಕು ಎಂದು ಒತ್ತಾಯಿಸಿ ಕನ್ನಡನಾಡು ಹಿತ ರಕ್ಷಣಾ ಸಮಿತಿ ಉಬ್ರಾಣಿ ಹೋಬಳಿ ಘಟಕದಿಂದ ಉಪ ತಹಶೀಲ್ದಾರ್ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.

ನಾಡಕಚೇರಿಯನ್ನು ಕರ್ಕಿಕೆರೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಬೇರೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಕರ್ಕಿಕೆರೆ ಗ್ರಾಮ ದುರ್ವಿಗೆರೆ ಹಾಗೂ ನೆಲ್ಲಹಂಕಲು ಗ್ರಾಮಕ್ಕೆ ತುಂಬಾ ದೂರವಾಗುತ್ತದೆ. ಇಲ್ಲಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಕರ್ಕಿಕೆರೆಯ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕುಡಿಯುವ ನೀರು, ಸಂಪರ್ಕ ರಸ್ತೆ, ವಿದ್ಯುತ್ ಸೌಕರ್ಯ ಇಲ್ಲ. ಇಲ್ಲಿಗೆ ನಾಡಕಚೇರಿಯನ್ನು ಸ್ಥಳಾಂತರ ಮಾಡುವುದರಿಂದ ಗ್ರಾಮೀಣ ಪ್ರದೇಶಗಳ ಜನರಿಗೆ ಅನಾನುಕೂಲವಾಗುತ್ತದೆ ಎಂದು ಸಮಿತಿ ಸದಸ್ಯರು ದೂರಿದರು.

ತಾವರೆಕೆರೆಯಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡ ಇದ್ದು, 40 ವರ್ಷಗಳಿಂದ ಇದು ಉಪಯೋಗವಾಗುತ್ತಿಲ್ಲ. ನಾಡಕಚೇರಿಯನ್ನು ಈ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಆರಂಭಿಸಲು ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಿತಿ ಗೌರವಾಧ್ಯಕ್ಷ ಎನ್.ಎಸ್. ನಾಗರಾಜ್ ರಾವ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಟಿ.ಕೆ. ಇನಾಯತ್ ಉಲ್ಲಾ, ನೆಲ್ಲಿಹಂಕಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಶ್ ನಾಯ್ಕ, ಮದನ್, ಸೋಮಶೇಖರ್, ಮಹೇಶ್, ರುದ್ರಪ್ಪ, ದೇವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT