ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಕುಸಿಯುತ್ತಿರುವ ಅಂತರ್ಜಲ

Published 4 ಅಕ್ಟೋಬರ್ 2023, 18:29 IST
Last Updated 4 ಅಕ್ಟೋಬರ್ 2023, 18:29 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣ ಬರಗಾಲ ಆವರಿಸಿರುವುದು ಒಂದೆಡೆಯಾದರೆ ಇನ್ನೊಂದೆಡೆ ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು, ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ಎಲ್ಲಾ ಕಡೆ ಮಳೆಯಾಗದಿರುವುದು, ಪಂಪ್‌ಸೆಟ್‌ಗಳು, ಮೋಟರ್‌ಗಳು ಚಾಲನೆಯಲ್ಲಿರುವುದು ಕಾರಣ. ಮಳೆಗಾಲದಲ್ಲಿ ಮಳೆ ಬೀಳುತ್ತಿರುವುದರಿಂದ ಸಾಮಾನ್ಯವಾಗಿ ಮೋಟರ್‌ಗಳನ್ನು ಕಾರ್ಯಾಚರಣೆ ಮಾಡುವುದಿಲ್ಲ. ಆದರೆ ಈಗ ಮಳೆಯಾಗದೇ ಇರುವುದು ಹಾಗೂ ಮೋಟರ್‌ಗಳು ನಿರಂತರವಾಗಿ ಕಾರ್ಯಾಚರಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ.

ಮಳೆಗಾಲದಲ್ಲಿಯೇ ಮಳೆ ಇಲ್ಲದೇ ಜಲಮೂಲಗಳು ಒಣಗುವ ಜತೆಗೆ ಕೊಳವೆಬಾವಿಗಳ ಬಳಕೆ ಹೆಚ್ಚಾಗಿರುವುದರಿಂದ ಜಿಲ್ಲೆಯಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟವು ನೆಲಮಟ್ಟದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್ ವೇಳೆಗೆ ಸರಾಸರಿ 5.10 ಮೀಟರ್ ಕೆಳಗೆ ಕುಸಿದಿದೆ. ಕಳೆದ ವರ್ಷ ಸರಾಸರಿ ಅಂತರ್ಜಲ ಮಟ್ಟ 3.80 ಮೀಟರ್ ಇದ್ದಿದ್ದು, ಈ ವರ್ಷ 8.90 ಮೀಟರ್‌ನಷ್ಟು ಕುಸಿತ ಕಂಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದ್ದು, ಜಗಳೂರಿನಲ್ಲಿ ಅತಿ ಹೆಚ್ಚು ಅಂದರೆ 18.21 ಮೀಟರ್‌ಗಳಷ್ಟು ಕುಸಿದಿದ್ದರೆ, ಹೊನ್ನಾಳಿಯಲ್ಲಿ ಕಡಿಮೆ ಅಂದರೆ 3.40 ಮೀಟರ್‌ಗಳಷ್ಟು ಕುಸಿದಿದೆ. ಉಳಿದಂತೆ ಹರಿಹರದಲ್ಲಿ 4.59, ದಾವಣಗೆರೆಯಲ್ಲಿ 8.68, ಚನ್ನಗಿರಿಯಲ್ಲಿ 6.89, ನ್ಯಾಮತಿಯಲ್ಲಿ 11.63 ಮೀಟರ್‌ಗಳಷ್ಟು ಕ್ಷೀಣಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ದಾವಣಗೆರೆಯಲ್ಲಿ 3.31 ಮೀಟರ್, ಹರಿಹರದಲ್ಲಿ 1.95 ಮೀಟರ್, ಚನ್ನಗಿರಿಯಲ್ಲಿ 2.51, ಹೊನ್ನಾಳಿಯಲ್ಲಿ 2.00, ನ್ಯಾಮತಿಯಲ್ಲಿ 2.45 ಹಾಗೂ ಜಗಳೂರಿನಲ್ಲಿ ಅತಿ ಹೆಚ್ಚು ಅಂದರೆ 10.55ರಷ್ಟು ಅಂತರ್ಜಲ ಕುಸಿದಿದ್ದು, ಸರಾಸರಿ 3.80ರಷ್ಟು ಕುಸಿದಿತ್ತು.

ದಾವಣಗೆರೆ ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 5.37 ಮೀಟರ್, ಹರಹರ ತಾಲ್ಲೂಕಿನಲ್ಲಿ 2.64, ಚನ್ನಗಿರಿ ತಾಲ್ಲೂಕಿನಲ್ಲಿ 4.38, ಹೊನ್ನಾಳಿಯಲ್ಲಿ 1.40, ನ್ಯಾಮತಿಯಲ್ಲಿ 9.18, ಜಗಳೂರು ತಾಲ್ಲೂಕಿನಲ್ಲಿ 7.66 ಮೀಟರ್‌ನಷ್ಟು ಕುಸಿತ ಕಂಡಿದೆ.

‘ವರ್ಷದಿಂದ ವರ್ಷಕ್ಕೆ ಅಂತರ್ಜಲಮಟ್ಟ ಕುಸಿಯುತ್ತಲೇ ಇದೆ. ಈ ಬಾರಿ ಮಳೆ ಕೂಡ ಸಮರ್ಪಕವಾಗಿ ಬಾರದೇ ಇರುವುದರಿಂದ ಕೊಳವೆಬಾವಿ ನೀರು ಹೆಚ್ಚು ಬಳಕೆಯಾಗುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಬದು, ಕೃಷಿ ಹೊಂಡಗಳ ನಿರ್ಮಾಣ, ಬೋರ್ವೆಲ್ ರೀಚಾರ್ಜ್ ಮಾಡಿಕೊಂಡಾಗ ನೀರು ಜಮೀನುನಲ್ಲಿ ನಿಲ್ಲುತ್ತದೆ ಇದರಿಂದ ಅಂತರ್ಜಲ ಮಟ್ಟವು. ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಬಸವರಾಜ್ ಸಲಹೆ ನೀಡಿದರು. 

ಆಗಸ್ಟ್ ತಿಂಗಳಲ್ಲಿ ಕುಸಿತದ ಪ್ರಮಾಣ

ತಾಲ್ಲೂಕು;2022;2023;ಇಳಿಕೆ

ದಾವಣಗೆರೆ;3.92;8.65;4.73

ಹರಿಹರ;2.18;4.02;1.84

ಚನ್ನಗಿರಿ;2.51;6.42;3.91

ನ್ಯಾಮತಿ;2.17;8;5.83

ಜಗಳೂರು;12.78;16.54;3.76

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT