ದಾವಣಗೆರೆ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹೂ–ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ನರಕ ಚತುರ್ದಶಿಯ ದಿನವಾದ ಸೋಮವಾರ ಮಾರುಕಟ್ಟೆಗೆ ಧಾವಿಸಿದ ಗ್ರಾಹಕರು, ಲಕ್ಷ್ಮಿ ಪೂಜೆ ಹಾಗೂ ಬಲಿಪಾಡ್ಯಮಿಗೆ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಬೆಳಕಿನ ಹಬ್ಬಕ್ಕೆ ಬೇಕಾಗಿರುವ ಮಣ್ಣಿನ ಹಣತೆ, ಆಕಾಶ ಬುಟ್ಟಿ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ವಿವಿಧ ವಿನ್ಯಾಸದ ಹಣತೆಗಳು ಗ್ರಾಹಕರನ್ನು ಆಕರ್ಷಿಸಿದವು. ಹಬ್ಬಕ್ಕೆ ಅಗತ್ಯವಾಗಿರುವ ಕಾಚಿನಕಡ್ಡಿ, ಮಾಲಿಂಗನಬಳ್ಳಿ, ಉತ್ರಾಣಿ ಕಡ್ಡಿ ಸೇರಿದಂತೆ ಪೂಜಾ ಸಾಮಗ್ರಿಗಳು ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದ್ದವು.

ಹಬ್ಬದ ಅಂಗವಾಗಿ ನಗರದ ಪ್ರವಾಸಿ ಮಂದಿರ ರಸ್ತೆ, ಹದಡಿ ರಸ್ತೆ, ಚಾಮರಾಜಪೇಟೆ, ಕಾಯಿಪೇಟೆ, ಶಾಮನೂರು ರಸ್ತೆ, ಪಿ.ಬಿ. ರಸ್ತೆ ಸೇರಿ ಹಲವೆಡೆ ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿಯಾಗಿದ್ದವು. ಹೂ, ಹಣ್ಣುಗಳ ಜೊತೆಗೆ ಮಾವಿನ ತೋರಣ, ಬಾಳೆ ಕಂದು, ಬೂದಕುಂಬಳ ಸೇರಿ ಹಲವು ಸಾಮಗ್ರಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಪ್ರವಾಸಿ ಮಂದಿರದ ರಸ್ತೆಯಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಹಬ್ಬಕ್ಕೆ ಬೇಕಾಗಿರುವ ಎಲ್ಲ ಸಾಮಗ್ರಿಗಳು ಇಲ್ಲಿ ಲಭ್ಯವಿದ್ದವು. ಮಂಗಳವಾರ ಲಕ್ಷ್ಮಿಪೂಜೆ ಹಾಗೂ ಬುಧವಾರ ಬಲಿಪಾಡ್ಯಮಿ ಇರುವುದರಿಂದ ಹೆಚ್ಚಿನ ಗ್ರಾಹಕರು ಸೋಮವಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಅಂಗಡಿ ಹಾಗೂ ವಾಹನಗಳ ಪೂಜೆಗೆ ಬೂದುಕುಂಬಳ, ವಿವಿಧ ವಿನ್ಯಾಸದ ಹೂವಿನ ಹಾರಗಳನ್ನು ಖರೀದಿಸುತ್ತಿದ್ದರು. ಹೂವಿನ ಹಾರಕ್ಕೆ ₹ 250ರಿಂದ ₹ 800ರವರೆಗೆ ಬೆಲೆ ಇತ್ತು.

ದಸರಾ ಮಹೋತ್ಸವಕ್ಕೆ ಹೋಲಿಸಿದರೆ ದೀಪಾವಳಿಗೆ ಹಣ್ಣುಗಳ ದರ ಕೊಂಚ ಏರಿಕೆಯಾಗಿದೆ. ಕೆ.ಜಿ. ಸೇಬು ₹ 100ರಿಂದ ₹ 150ಕ್ಕೆ ಹೆಚ್ಚಳವಾಗಿದೆ. ದೀಪಾವಳಿಗೆ ಬೇಕಾಗುವ ಚಂಡು, ಸೇವಂತಿ ಹೂಗಳ ಬೆಲೆ ಅಷ್ಟೇನೂ ಏರಿಕೆ ಕಂಡಿಲ್ಲ. ಗುಲಾಬಿ, ಕನಕಾಂಬರ, ಮಲ್ಲಿಗೆ ಸೇರಿದಂತೆ ಇತರ ಹೂಗಳ ದರ ಹೆಚ್ಚಾಗಿತ್ತು.

ಕೆಸರು ಗದ್ದೆಯಾದ ಮಾರುಕಟ್ಟೆ: ಹಬ್ಬದ ಅಂಗವಾಗಿ ಹೂ–ಹಣ್ಣಿನ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬೀರಲಿಂಗೇಶ್ವರ ದೇಗುಲದ ಮೈದಾನದಲ್ಲಿ ತೆರೆಯಲಾಗಿತ್ತು. ಸಂಚಾರ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಪ್ರವಾಸಿ ಮಂದಿರ ರಸ್ತೆಯಲ್ಲಿದ್ದ ವ್ಯಾಪಾರಸ್ಥರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಭಾನುವಾರ ರಾತ್ರಿ ಸುರಿದ ಮಳೆಗೆ ಈ ಮಾರುಕಟ್ಟೆ ಕೆಸರು ಗದ್ದೆಯಾಗಿ ಪರಿವರ್ತನೆಯಾಯಿತು.

ಬಿರುಸಿನಿಂದ ಸುರಿದ ಮಳೆಗೆ ಮೈದಾನದಲ್ಲಿ ನೀರು ನಿಂತಿತ್ತು. ಕೆಲ ವ್ಯಾಪಾರಿಗಳ ಹೂ, ಹಣ್ಣುಗಳು ನೀರುಪಾಲಾದವು. ಕೆಸರಲ್ಲಿ ಬಿದ್ದು ಹಾಳಾದವು. ಇದರಿಂದ ಆಕ್ರೋಶಗೊಂಡ ವ್ಯಾಪಾರಸ್ಥರು ಪೊಲೀಸರ ವಿರುದ್ಧ ಹರಿಹಾಯ್ದರು. ಸೋಮವಾರ ನಸುಕಿನ ಹೊತ್ತಿಗೆ ಪ್ರವಾಸಿ ಮಂದಿರ ರಸ್ತೆಯಲ್ಲಿ ಮಾರುಕಟ್ಟೆ ಮರು ಆರಂಭವಾಯಿತು.

ಸಂಚಾರ ಸಮಸ್ಯೆ: ಜಯದೇವ ವೃತ್ತದಿಂದ ಪಿ.ಬಿ. ರಸ್ತೆಯ ಬಿಎಸ್ಎನ್ಎಲ್ ವೃತ್ತವನ್ನು ಸಂಪರ್ಕಿಸುವ ಮಾರ್ಗದ ಎರಡು ಬದಿಯಲ್ಲಿ ಹೂ, ಹಣ್ಣು ಮಾರಾಟ ಜೋರಾಗಿತ್ತು. ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನರು ದೀಪಾವಳಿಗೆ ಅಗತ್ಯವಿರುವ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಖರೀದಿಗೆ ನಗರದ ವಿವಿಧೆಡೆಯಿಂದ ಸಾವಿರಾರು ಜನರು ಇಲ್ಲಿಗೆ ಧಾವಿಸಿದ್ದರು. ಈ ಮಾರ್ಗದಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಮಸ್ಯೆ ಸೃಷ್ಟಿಯಾಗಿತ್ತು.

ಜಯದೇವ ವೃತ್ತ ಮತ್ತು ಬಿಎಸ್ಎನ್ಎಲ್ ವೃತ್ತದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಬಸ್, ಆಟೊ, ಕಾರು, ದ್ವಿಚಕ್ರ ವಾಹನ, ಸರಕು ಸಾಗಣೆ ಲಘು ವಾಹನಗಳು ಇದೇ ಮಾರ್ಗದಲ್ಲಿ ಸಾಗುತ್ತಿದ್ದವು. ಆಗಾಗ ಈ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಇದರಿಂದ ವ್ಯಾಪಾರಕ್ಕೂ ತೊಂದರೆ ಉಂಟಾಗುತ್ತಿತ್ತು. ಖರೀದಿಯಲ್ಲಿ ತೊಡಗಿದ್ದ ಗ್ರಾಹಕರಿಗೆ ವಾಹನಗಳು ಡಿಕ್ಕಿಯಾಗಿ ವಾಗ್ವಾದ ಕೂಡ ನಡೆದವು. ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದಿಂದ ಬಂದ ಪೂಜಾ ಸಾಮಗ್ರಿ ಸೇಬು ಹಣ್ಣಿನ ಬೆಲೆ ಹೆಚ್ಚಳ ನರಕ ಚತುರ್ದಶಿಯಂದು ಮಾರುಕಟ್ಟೆಗೆ ಬಂದ ಗ್ರಾಹಕರು

ಬೀರಲಿಂಗೇಶ್ವರ ದೇಗುಲದ ಆವರಣ ಮಳೆಯಿಂದ ಕೆಸರು ಗದ್ದೆಯಾಯಿತು. ಗ್ರಾಹಕರು ಮೈದಾನಕ್ಕೆ ಬರುವುದು ಅನುಮಾನ ಮೂಡಿಸಿತು. ಪ್ರವಾಸಿ ಮಂದಿರ ರಸ್ತೆಯಲ್ಲಿ ಮರಳಿ ವ್ಯಾಪಾರ ಆರಂಭಿಸಿದೆವು
ಗಿರೀಶ್ ಹಣ್ಣು ವ್ಯಾಪಾರಿ

ದೀಪಾವಳಿಗೆ ಅಗತ್ಯವಿರುವ ಪೂಜಾ ಸಾಮಗ್ರಿಗಳನ್ನು ಹಳ್ಳಿಯಿಂದ ತಂದಿದ್ದೇವೆ. ನಿರೀಕ್ಷಿತ ಮಟ್ಟದ ಗ್ರಾಹಕರು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಮಂಗಳವಾರ ಖರೀದಿ ಹೆಚ್ಚಾಗುವ ಸಾಧ್ಯತೆ ಇದೆ
ರಾಮಪ್ಪ ಅಡವಿಹಳ್ಳಿ ಹರಪನಹಳ್ಳಿ ತಾಲ್ಲೂಕು

ಹಣ್ಣುಗಳ ದರ (ಕೆ.ಜಿ.) ಸೇಬು – ₹ 150 ದಾಳಿಂಬೆ– ₹ 140 ಸೀತಾಫಲ– ₹ 120 ಸಪೋಟ– ₹ 120 ಮೂಸಂಬಿ– ₹ 100 ಕಿತ್ತಳೆ – ₹ 60 ದ್ರಾಕ್ಷಿ– ₹ 150 ಬಾಳೆ– ₹ 70 ಹೂವಿನ ದರ ಸೇವಂತಿ– (ಕೆ.ಜಿ) ₹ 280 ಬಟನ್ಸ್ ಗುಲಾಬಿ (ಕೆ.ಜಿ) ₹400 ಕನಕಾಂಬರ (ಮಾರು) ₹ 200 ಮಲ್ಲಿಗೆ (ಮಾರು) ₹ 200 ಚಂಡು ಹೂ (ಮಾರು) ₹ 60 ಪೂಜಾ ಸಾಮಗ್ರಿ (ಕಟ್ಟು) ಕಾಚಿನ ಕಡ್ಡಿ– ₹ 10 ಉತ್ರಾಣಿ ಕಡ್ಡಿ– ₹ 10 ಮಾವಿನ ತೋರಣ– ₹ 10 ಬಾಳೆಕಂದು– ₹ 20 ಅಡಿಕೆ ಹೊಂಬಾಳೆ – ₹ 100 ಗರಿಕೆ – ₹ 10 ತಂಗಡಿಕೆ ಹೂ– ₹ 10 ಬ್ರಹ್ಮದಂಡೆ– ₹ 10 ಬೂದಕುಂಬಳ– ₹ 50–₹ 200

ನೆರವೇರಿದ ಲಕ್ಷ್ಮಿ ಪೂಜೆ ಜಿಲ್ಲೆಯ ವಿವಿಧೆಡೆ ಅಂಗಡಿಗಳಲ್ಲಿ ಸೋಮವಾರವೇ ಲಕ್ಷ್ಮಿಪೂಜೆ ನೆರವೇರಿಸಲಾಯಿತು. ನರಕ ಚತುರ್ದಶಿ ಹಾಗೂ ಲಕ್ಷ್ಮಿ ಪೂಜೆಯನ್ನು ಒಂದೇ ದಿನ ಆಚರಿಸಲಾಯಿತು. ಸಾಮಾನ್ಯವಾಗಿ ನರಕ ಚತುರ್ದಶಿಯ ಮರುದಿನ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಆದರೆ ಸೋಮವಾರ ಸಂಜೆಯಿಂದ ಅಮವಾಸ್ಯೆ ಆರಂಭವಾಗಿದ್ದರಿಂದ ಜನರು ಪೂಜೆಗೆ ಉತ್ಸುಕತೆ ತೋರಿದರು. ಮಂಗಳವಾರ ಸಂಜೆಯ ಬದಲಿಗೆ ಒಂದು ದಿನ ಮುಂಚಿತವಾಗಿ ಪೂಜೆ ನೆರವೇರಿಸಿದರು. ಪಟಾಕಿಗಳನ್ನು ಸಿಡಿಸಿ ಸಿಹಿ ತಿನಿಸು ವಿತರಿಸಿ ಸಂಭ್ರಮಿಸಿದರು.

ಆಕರ್ಷಕ ಆಕಾಶಬುಟ್ಟಿ ಹಣತೆ ಬೆಳಕಿನ ಹಬ್ಬದ ಅಂಗವಾಗಿ ಮಾರುಕಟ್ಟೆಗೆ ಆಕರ್ಷಕ ಆಕಾಶಬುಟ್ಟಿ ಹಾಗೂ ಹಣತೆಗಳು ಬಂದಿವೆ. ಆಕಾಶಬುಟ್ಟಿಗಳು ₹ 150ರಿಂದ ₹ 2000ದವರೆಗೆ ಹಾಗೂ ಹಣತೆಗಳು ₹ 10ರಿಂದ ₹ 100ರವರೆಗೆ ಮಾರಾಟವಾಗುತ್ತಿವೆ. ಎವಿಕೆ ಕಾಲೇಜು ರಸ್ತೆ ಪಿ.ಬಿ. ರಸ್ತೆ ಚೌಕಿಪೇಟೆ ಸೇರಿದಂತೆ ನಗರದ ಹಲವೆಡೆ ಆಕಾಶಬುಟ್ಟಿಗಳು ಕಣ್ಮನ ಸೆಳೆಯುತ್ತಿವೆ. ವಿದ್ಯುತ್ ದೀಪಾಲಂಕಾರದ ಪ್ಲಾಸ್ಟಿಕ್ ಫೈಬರ್ನ ಕೆಲ ಬುಟ್ಟಿಗಳು ಜಲನಿರೋಧಕ ಕೂಡ ಹೌದು. ಚೌಕಾಕಾರ ಪಿರಾಮಿಡ್ ಬುಗುರಿ ಸೇರಿದಂತೆ ಹಲವು ವಿನ್ಯಾಸದಲ್ಲಿ ಗಮನ ಸೆಳೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.